ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 54ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ 86 ರನ್ ಜಯ ಗಳಿಸಿದೆ. ಶುಬ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್, ಶಿವಂ ಮಾವಿ ಮತ್ತು ಲಾಕಿ ಫಾರ್ಗುಸನ್ ಮಾರಕ ಬೌಲಿಂಗ್‌ನೊಂದಿಗೆ ಕೆ.ಕೆ.ಆರ್ ಪ್ಲೇ ಆಫ್ಸ್ ದಾರಿ ಸುಲಭವಾಗಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್ಮನ್ ಗಿಲ್ 56 (44 ಎಸೆತ), ವೆಂಕಟೇಶ್ ಅಯ್ಯರ್ 38 (35 ಎಸೆತ), ನಿತೀಶ್ ರಾಣಾ 12, ರಾಹುಲ್ ತ್ರಿಪಾಠಿ 21, ಇಯೋನ್ ಮಾರ್ಗನ್ 13, ದಿನೇಶ್ ಕಾರ್ತಿಕ್ 14 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 171 ರನ್ ಗಳಿಸಿತ್ತು. ಈ ಸೋಲಿನ ಮೂಲಕ ಪಂಜಾಬ್ ತಂಡವು ಟೂರ್ನಿಯಿಂದ ಔಟ್ ಆಗಿದೆ.
PublicNext
08/10/2021 12:27 am