ನವದೆಹಲಿ : ಕೂಲ್ ಕ್ಯಾಪ್ಟನ್ ಎಂದೆ ಖ್ಯಾತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಒಮ್ಮೊಮ್ಮೆ ಆಟಗಾರರ ಮೇಲೆ ಕೊಂಚ ಸಿಟ್ಟಾಗಿದ್ದೂ ಇದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಳೆಯ ಘಟನೆಯನ್ನು ಮೆಲಕು ಹಾಕಿದ್ದಾರೆ.
ಮೈದಾನದಲ್ಲಿ ಎಂತಹದ್ದೇ ಪರಿಸ್ಥಿತಿಯಿದ್ದರೂ ಶಾಂತ ರೀತಿಯಿಂದ ವರ್ತಿಸುವ ಧೋನಿ ಒಮ್ಮೊಮ್ಮೆ ಆಟಗಾರರ ಮೇಲೆ ಕೊಂಚ ಸಿಟ್ಟಾಗಿದ್ದೂ ಇದೆ. 2014ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್( ಈಗ ಪಂಜಾಬ್ ಕಿಂಗ್ಸ್) ನಡುವಿನ ಪಂದ್ಯದ ವೇಳೆ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪಂಜಾಬ್ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕಬಳಿಸಿ ವಿನೂತನವಾಗಿ ಕ್ರೀಸ್ ನಿಂದ ಬೀಳ್ಕೊಟ್ಟಿದರು. ಆಗ ಅಶ್ವಿನ್ ಮೇಲೆ ಧೋನಿ ಗದರಿದ್ದರು ಎಂದು ಆ ದಿನಗಳನ್ನು ನೆನೆದಿದ್ದಾರೆ.
ಕ್ರೀಡಾ ಸ್ಪೂರ್ತಿಯ ಕುರಿತಂತೆ ಕ್ರೀಡಾವಲಯದಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಆಟಗಾರರಾದರು ಕ್ರೀಡಾಸ್ಪೂರ್ತಿಯ ಕುರಿತಂತೆ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಏನಾಗುತ್ತದೆಯೇ ಅದನ್ನು ಅಲ್ಲಿಯೇ ಬಿಡಬೇಕು, ಮುಂದುವರೆಸಿಕೊಂಡು ಹೋಗಬಾರದು. ಎಂದು ಕ್ರಿಕ್ ಬಜ್ನ ವಿಡಿಯೋ ಸಂವಾದದಲ್ಲಿ ವೀರೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
PublicNext
02/10/2021 08:05 am