ದುಬೈ: ವೆಂಕಟೇಶ್ ಅಯ್ಯರ್ ಹಾಗೂ ರಾಹುಲ್ ತ್ರಿಪಾಠಿ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡಕ್ಕೆ 166 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ತಂಡದ ಪರ ವೆಂಕಟೇಶ್ ಅಯ್ಯರ್ 67 ರನ್, ರಾಹುಲ್ ತ್ರಿಪಾಯ 34 ರನ್, ನಿತೀಶ್ ರಾಣಾ 31 ರನ್ ದಾಖಲಿಸಿದರು.
ಇನ್ನು ಪಂಜಾಬ್ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಕಿತ್ತರೆ, ರವಿ ಬಿಷ್ಣೋಯಿ 2 ವಿಕೆಟ್ ಹಾಗೂಮೊಹಮ್ಮದ್ ಶಮಿ ಒಂದು ವಿಕೆಟ್ ಉರುಳಿಸಿದರು.
PublicNext
01/10/2021 09:23 pm