ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021 | DC vs KKR: ಒಂದೇ ಒಂದು ಸಿಕ್ಸ್ ಸಿಡಿಸದ ಡೆಲ್ಲಿ- ಕೆಕೆಆರ್‌ಗೆ 128 ರನ್‌ಗಳ ಗುರಿ

ಶಾರ್ಜಾ: ಪ್ರಮುಖ ಆಟಗಾರರ ಬ್ಯಾಟಿಂಗ್ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಲ್ಕತ್ತಾ ನೈಟ್‌ರೈಡರ್ಸ್ ತಂಡಕ್ಕೆ 128 ರನ್‌ಗಳ ಸಾಧಾರಣ ಮೊತ್ತ ಗುರಿ ನೀಡಿದೆ.

ಶಾರ್ಜಾ ಮೈದಾನದಲ್ಲಿ ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ 41ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತನ್ನ ಬೌಲಿಂಗ್ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್‌ ಗಳಿಸಲು ಶಕ್ತವಾಯಿತು. ಡೆಲ್ಲಿ ಪರ ಸ್ಟೀವ್ ಸ್ಮಿತ್ 39 ರನ್, ಶಿಖರ್ ಧವನ್ 24 ರನ್ ಹಾಗೂ ನಾಯಕ ರಿಷಭ್ ಪಂತ್ 39 ರನ್ ಗಳಿಸಿದರು. ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಯಾವುದೇ ಆಟಗಾರರು ಒಂದೇ ಒಂದು ಸಿಕ್ಸ್‌ ಸಿಡಿಸದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

Edited By : Vijay Kumar
PublicNext

PublicNext

28/09/2021 05:29 pm

Cinque Terre

52.94 K

Cinque Terre

0

ಸಂಬಂಧಿತ ಸುದ್ದಿ