ಅಬುಧಾಬಿ: ಶ್ರೇಯಸ್ ಐಯ್ಯರ್, ಶಿಮ್ರಾನ್ ಹೆಟ್ಮೀರ್ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್‌ಗೆ 155 ರನ್‌ಗಳ ಗುರಿ ನೀಡಿದೆ.
ಅಬುಧಾಬಿಯಲ್ಲಿ ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ 36ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮ್ಮ ಫೀಲ್ಡಿಂಗ್ ಆಯ್ಕೆಯನ್ನು ಸಮರ್ಥಿಸಿಕೊಂಡರು. ಸ್ಯಾಮ್ಸನ್ ಪಡೆಯು ಡೆಲ್ಲಿ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿತು. 21 ರನ್ ವೇಳೆಗೆ ಡೆಲ್ಲಿ ಆರಂಭಿಕ ಆಟಗಾರರಾದ ಶಿಖರ್ ಧವನ್ (8 ರನ್), ಪೃಥ್ವಿ ಶಾ (10 ರನ್) ಬಹುಬೇಗ ವಿಕೆಟ್ ಕಳೆದುಕೊಂಡರು. ಬಳಿಕ ಶ್ರೇಯಸ್ ಅಯ್ಯರ್ 43 ರನ್ (32 ಎಸೆತ, 1 ಬೌಂಡರಿ 2 ಸಿಕ್ಸರ್), ನಾಯಕ ರಿಷಭ್ ಪಂತ್ 24 ರನ್ ಹಾಗೂ ಶಿಮ್ರಾನ್ ಹೆಟ್ಮೀರ್ 28 ರನ್ ಗಳಿಸಿದರು. ಪರಿಣಾಮ ಆರ್‌ಆರ್ ತಂಡವು 6 ವಿಕೆಟ್ ನಷ್ಟಕ್ಕೆ 154 ಗಳಿಸಿತು.
ರಾಜಸ್ಥಾನ್ ರಾಯಲ್ಸ್ ಪರ ಮುಸ್ತಫಿಜುರ್ ರಹಮಾನ್ ಹಾಗೂ ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಉರುಳಿಸಿದರೆ, ಕಾರ್ತಿಕ್ ತ್ಯಾಗಿ ಹಾಗೂ ರಾಹುಲ್ ತೆವಾಟಿಯಾ ತಲಾ ಒಂದು ವಿಕೆಟ್ ಕಿತ್ತರು.
PublicNext
25/09/2021 05:26 pm