ಅಬುಧಾಬಿ: ಆರ್ ಸಿಬಿ ಎದುರು ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಕೆಕೆಆರ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಲೀಗ್ ಇತಿಹಾಸ ಗಮನಿಸಿದರೆ ಕೆಕೆಆರ್ ಎದುರು ಶೇಕಡ 78.57 ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ಅರಬ್ ನೆಲದಲ್ಲಿ ಗೆಲುವಿನ ಹಳಿಗೇರುವ ತವಕದಲ್ಲಿದೆ.
ಎರಡನೇ ಭಾಗದ ಮೊದಲ ಪಂದ್ಯದಲ್ಲಿ ಸಿಎಸ್ ಕೆ ಎದುರು ಹೀನಾಯವಾಗಿ ಶರಣಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಾಪಸಾಗಿದ್ದಾರೆ.
ಉಳಿದಿರುವ 6 ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆದ್ದರೂ ಮುಂಬೈ ತಂಡದ ಪ್ಲೇ ಆಪ್ ಹಾದಿ ಸುಗಮವಾಗಲಿದೆ. ಆರ್ ಸಿಬಿ ಎದುರು ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಕೆಕೆಆರ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಆರಂಭಿಕ ವೆಂಕಟೇಶ್ ಅಯ್ಯರ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದು, ಮತ್ತೊಮ್ಮೆ ಇನಿಂಗ್ಸ್ ಆರಂಭಿಸಲಿದ್ದಾರೆ.
ಮುಂಬೈ-ಕೆಕೆಆರ್ ಒಟ್ಟು ಮುಖಾಮುಖಿ: 28
ಮುಂಬೈ: 22
ಕೆಕೆಆರ್: 06
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ಡಿ ಕಾಕ್, ರೋಹಿತ್ (ನಾಯಕ), ಸೂರ್ಯ, ಕಿಶನ್, ಹಾರ್ದಿಕ್/ತಿವಾರಿ, ಕೃನಾಲ್, ಪೊಲ್ಲಾರ್ಡ್, ರಾಹುಲ್ ಚಹರ್, ಮಿಲ್ನೆ, ಬೌಲ್ಟ್, ಬೂಮ್ರಾ.
ಕೆಕೆಆರ್: ಗಿಲ್, ವೆಂಕಟೇಶ್ ಅಯ್ಯರ್, ತ್ರಿಪಾಠಿ, ನಿತೀಶ್ ರಾಣಾ, ಮೊರ್ಗನ್(ನಾಯಕ), ರಸೆಲ್, ಕಾರ್ತಿಕ್, ನರೇನ್, ಫಗ್ರ್ಯೂಸನ್, ಪ್ರಸಿದ್ಧ ಕೃಷ್ಣ, ವರುಣ್.
PublicNext
23/09/2021 12:59 pm