ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2021 LIVE | PBKS vs RR: ಅರ್ಧಶತಕ ಕೈಚೆಲ್ಲಿದ ಜೈಸ್ವಾಲ್, ಲೋಮರ್: ಕೆಎಲ್ ರಾಹುಲ್ ಪಡೆಗೆ 186 ರನ್‌ಗಳ ಗುರಿ

ದುಬೈ: ಮಹಿಪಾಲ್ ಲೋಮರ್ ಸ್ಫೋಟ ಬ್ಯಾಟಿಂಗ್ ಹಾಗೂ ಯಶಸ್ವಿ ಜೈಸ್ವಾಲ್ ಸಮಯೋಚಿತ ಆಟದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ಗೆ 186 ರನ್‌ಗಳ ಗುರಿ ನೀಡಿದೆ.

ಐಪಿಎಲ್ 14ನೇ ಆವೃತ್ತಿಯ ಭಾಗವಾಗಿ ನಡೆಯುತ್ತಿರುವ 32ನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ತಂಡವು ರಾಜಸ್ಥಾಸ್ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌ ಗಳನ್ನು ಕಟ್ಟಿಹಾಕುವಲ್ಲಿ ಕೊಂಚ ಎಡವಿತು. ಪರಿಣಾಮ ಆರ್ ಆರ್ ನಿಗದಿತ 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ತಂಡದ ಪರ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 49 ರನ್, ಮಹಿಪಾಲ್ ಲೋಮರ್ 43 ರನ್ (17 ಎಸೆತ, 2 ಬೌಂಡರಿ, 4 ಸಿಕ್ಸರ್), ಎವಿನ್ ಲೂಯಿಸ್ (ಪದಾರ್ಪಣೆ ಪಂದ್ಯದಲ್ಲೇ) 36 ರನ್ ಗಳಿಸಿದರು.

ಪಂಜಾಬ್ ಕಿಂಗ್ಸ್ ಪರ ಆರ್ಷದೀಪ್ ಸಿಂಗ್ ಅಮೋಘ ಬಾಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಬೌಲಿಂಗ್ ಮಾಡಿದ ಅವರು 32 ರನ್ ನೀಡಿ ಪ್ರಮುಖ 5 ವಿಕೆಟ್ ಕಿತ್ತರು. ಇನ್ನು ಅನುಭವಿ ಬೌಲರ್ ಮೊಹಮ್ಮದ್ ಶಮಿ 3 ವಿಕೆಟ್, ಇಶಾನ್ ಪೊರೆಲ್ ಹಾಗೂ ಹರ್ದೀಪ್ ಬ್ರಾರ್ ತಲಾ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

Edited By : Nagaraj Tulugeri
PublicNext

PublicNext

21/09/2021 09:34 pm

Cinque Terre

82.13 K

Cinque Terre

0

ಸಂಬಂಧಿತ ಸುದ್ದಿ