ನವದೆಹಲಿ: ಐಪಿಎಲ್ 2021ರ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮೇ ಮೊದಲ ವಾರದಲ್ಲಿ ಈ ಋತುವನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು. ಈಗ ಮತ್ತೊಮ್ಮೆ ಟಿ20 ಕ್ರಿಕೆಟ್ನ ರೋಮಾಂಚಕತೆ ಎಲ್ಲರ ಕಣ್ಮನ ಸೆಳೆಯಲಿದೆ.
ಮೊದಲಾರ್ಧದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಆಟಗಾರರ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ (380 ರನ್) ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ 331 ರನ್ ಗಳಿಸಿದ್ದಾರೆ. ನಂತರ ಸ್ಥಾನದಲ್ಲಿ ಕ್ರಮವಾಗಿ ಫಾಫ್ ಡು ಪ್ಲೆಸಿಸ್ (320 ರನ್), ಪೃಥ್ವಿ ಶಾ (308 ರನ್), ಸಂಜು ಸ್ಯಾಮ್ಸನ್ (277 ರನ್), ಮಯಾಂಕ್ ಅಗರ್ವಾಲ್ (260 ರನ್), ಜೋಸ್ ಬಟ್ಲರ್ (254 ರನ್), ರೋಹಿತ್ ಶರ್ಮಾ (250 ರನ್), ಜಾನಿ ಬೈರ್‌ಸ್ಟೊ (248 ರನ್) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (223 ರನ್) ಇದ್ದಾರೆ.
PublicNext
17/09/2021 07:34 pm