ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಮುಗಿದಿದ್ದು, ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಪಡೆ 157 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿದೆ. ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನಕ್ಕೆ ಭಾರತ ಅಷ್ಟೇ ಅಲ್ಲದೆ ವಿದೇಶದ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯದ ಮಾಜಿ ಆಟಗಾರ ಶೇನ್ ವಾರ್ನ್ ಕೂಡ ಟೀಂ ಇಂಡಿಯಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರನ್ನು ಕೊಂಡಾಡಿದ್ದಾರೆ. "ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಪವರ್‌ಹೌಸ್ ಆಗಿದ್ದು, ಆ ತಂಡಕ್ಕೆ ವಿರಾಟ್ ಕೊಹ್ಲಿಯಂತಹ ಅತ್ಯುತ್ತಮ ಸೂಪರ್‌ಸ್ಟಾರ್ ರೀತಿಯ ನಾಯಕ ಸಿಕ್ಕಿರುವುದು ದೊಡ್ಡ ಮಟ್ಟದ ಯಶಸ್ಸಿಗೆ ಕಾರಣ. ವಿರಾಟ್ ಕೊಹ್ಲಿ ಯಾವಾಗಲೂ ನಾವು ಆಸ್ಟ್ರೇಲಿಯಾಕ್ಕೆ ಹೋಗಿ ಸರಣಿ ಗೆಲ್ಲುತ್ತೇವೆ, ಇಂಗ್ಲೆಂಡ್ ಪ್ರವಾಸ ಕೈಗೊಂಡು ಸರಣಿ ಗೆಲ್ಲುತ್ತೇವೆ ಎಂಬ ವಿಶ್ವಾಸದೊಂದಿಗೆ ವಿದೇಶಿ ಪ್ರಯಾಣ ಕೈಗೊಂಡು ಅವರ ನೆಲದಲ್ಲಿಯೇ ಎದುರಾಳಿಗಳನ್ನು ಸೋಲಿಸುತ್ತಿದ್ದಾರೆ' ಎಂದು ಶೇನ್ ವಾರ್ನ್ ಹೊಗಳಿದ್ದಾರೆ.
"ವಿರಾಟ್ ಕೊಹ್ಲಿಗೆ ಆತನ ತಂಡದ ಇತರೆ ಆಟಗಾರರು ಉತ್ತಮ ಗೌರವವನ್ನು ನೀಡಿ, ಆತ ನೀಡುವ ಆಜ್ಞೆಗಳನ್ನು ಪಾಲಿಸಿ ಆತನಿಗೋಸ್ಕರ ಉತ್ತಮ ಆಟವನ್ನು ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದರ ಮೂಲಕ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ಇಂತಹ ಅದ್ಭುತ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ವಿರಾಟ್ ಕೊಹ್ಲಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
PublicNext
07/09/2021 02:41 pm