ಲೀಡ್ಸ್(ಇಂಗ್ಲೆಂಡ್): ಇಂಗ್ಲೆಂಡ್ ಕ್ರಿಕೆಟ್ ತಂಡ ಲೀಡ್ಸ್‌ನ ಲಾರ್ಡ್ಸ್‌ನಲ್ಲಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಹೆಡಿಂಗ್ಲೆ ಲೀಡ್ಸ್ʼನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟೀಂ ಇಂಡಿಯಾವನ್ನ ಸೋಲು ಕಾಣಿಸಿದೆ.
ಟಾಸ್ ಗೆದ್ದ ನಂತರ ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ʼನಲ್ಲಿ ಕೇವಲ 78 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರ ನಂತರ, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 432 ರನ್ ಗಳಿಸಿದ ನಂತರ 354 ರನ್ʼಗಳ ಬೃಹತ್ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಹೋರಾಡಿದ ಟೀಮ್ ಇಂಡಿಯಾ ಕೇವಲ 278 ರನ್ಗಳಿಗೆ ತನ್ನ ಎಲ್ಲ ವಿಕೇಟ್‌ಗಳನ್ನ ಕಳೆದುಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಈ ಮೂಲಕ ಇಂಗ್ಲೆಂಡ್ ಮೂರನೇ ಟೆಸ್ಟ್ ಅನ್ನು ಇನ್ನಿಂಗ್ಸ್ ಮತ್ತು 76 ರನ್ʼಗಳಿಂದ ಗೆದ್ದುಕೊಂಡಿತು.
PublicNext
28/08/2021 08:16 pm