ನವದೆಹಲಿ: ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ನೀರಜ್ ಚೋಪ್ರಾ ಬಯೋಪಿಕ್ಗೆ ನಟ ಅಕ್ಷಯ ಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮೀಮ್ಗಳು ಹರಿದಾಡಿದ್ದವು. ಈ ಎಲ್ಲ ಊಹಾಪೋಹಗಳಿಗೆ ನೀರಜ್ ಚೋಪ್ರಾ ತೆರೆ ಎಳೆದಿದ್ದಾರೆ.
ಈಗಲೇ ನನ್ನ ಮೇಲೆ ಬಯೋಪಿಕ್ ಮಾಡಬೇಡಿ. ನಾನು ಇನ್ನೂ ಆಡುತ್ತಿದ್ದೇನೆ. ನನ್ನ ಪ್ರಯಾಣಕ್ಕೆ ಇನ್ನೂ ಹೆಚ್ಚಿನ ಕಥೆಗಳನ್ನು ಸೇರಿಸುವ ಉತ್ಸಾಹ ಹೊಂದಿದ್ದೇನೆ. ಹೀಗಾಗಿ ನಾನು ನಿವೃತ್ತಿಯಾದ ನಂತರವೇ ಬಯೋಪಿಕ್ ಮಾಡಿ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
PublicNext
09/08/2021 09:35 pm