ಮ್ಯಾಡ್ರಿಡ್: ಬಾರ್ಸಿಲೋನಾ ತಂಡದ ಸ್ಟಾರ್ ಫುಟ್ಬಾಟ್ ಆಟಗಾರ, ಅರ್ಜೆಂಟೀನಾ ರಾಷ್ಟ್ರೀಯ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ ಕಣ್ಣೀರಿನೊಂದಿಗೆ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ವಿದಾಯ ಹೇಳಿದ್ದಾರೆ.
ಬಾರ್ಸಿಲೋನಾ ತೊರೆಯುವುದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮೆಸ್ಸಿ ಆರಂಭದಿಂದಲೂ ಭಾವುಕರಾಗಿದ್ದರು. ಈ ವೇಳೆ ಕ್ಲಬ್ ತೊರೆಯಲು ನಿರ್ಧರಿಸಿರುವ ವಿಚಾರವನ್ನು ಖಾತರಿಪಡಿಸಿದ್ದಾರೆ. "ಬಾರ್ಸಿಲೋನಾದಲ್ಲಿ ಉಳಿಯಲು ನಾನು ಬಹಳ ಮನವೊಲಿಸಲು ಯತ್ನಿಸಿದೆ. ಇದು ನನ್ನ ಮನೆ, ನಮ್ಮ ಮನೆ. ನಾನು ಬಾರ್ಸಿಲೋನಾದಲ್ಲಿ ಉಳಿಯಲು ಬಯಸಿದ್ದೆ ಮತ್ತು ಅದೇ ನನ್ನ ಯೋಜನೆಯಾಗಿತ್ತು. ಆದರೆ ನನ್ನ ಇಡೀ ವೃತ್ತಿ ಜೀವನ ಕಳೆದ ಇಲ್ಲಿಗೆ ನಾನಿಂದು ವಿದಾಯ ಹೇಳುತ್ತಿದ್ದೇನೆ.
34ರ ಹರೆಯದ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ತಂಡದ ಪರ 17 ಸೀಸನ್‌ಗಳಲ್ಲಿ ಆಡಿದ್ದರು. ತಾನು 17ನೇ ಹರೆಯದವನಾಗಿದ್ದಾಗ ಮೆಸ್ಸಿ ಬಾರ್ಸಿಲೋನಾ ಪರ ಅಧಿಕೃತ ಪಂದ್ಯ ಆಡಿದ್ದರು. ಮೆಸ್ಸಿ ಆರು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ದೈತ್ಯ ಪ್ರತಿಭೆ.
ಕಳೆದ ಗುರುವಾರವೇ ಬಾರ್ಸಿಲೋನಾ ಕ್ಲಬ್, ಮೆಸ್ಸಿ ನಿರ್ಗಮನದ ಬಗ್ಗೆ ಸುಳಿವು ನೀಡಿತ್ತು. ಮೆಸ್ಸಿ ಮತ್ತು ಕ್ಲಬ್ ಮಧ್ಯೆ ಒಪ್ಪಂದಕ್ಕಾಗಿ ನಡೆದ ಮಾತುಕತೆ ಹೊಂದಿಕೆಯಾಗಿಲ್ಲ. ಹೀಗಾಗಿ ಮೆಸ್ಸಿ ಇನ್ನು ಕ್ಲಬ್‌ನಲ್ಲಿ ಮುಂದುವರೆಯುತ್ತಿಲ್ಲ ಎಂದು ಕ್ಲಬ್ ಹೇಳಿಕೊಂಡಿತ್ತು.
PublicNext
08/08/2021 05:57 pm