ಟೋಕಿಯೊ ಒಲಿಂಪಿಕ್ಸ್ ನ ಅಂಗವಾಗಿ ಜಾವೆಲಿನ್ ಥ್ರೋ ಫೈನಲ್ ನಲ್ಲಿ ಮಿಂಚುವ ಮೂಲಕ ನೀರಜ್ ಚೋಪ್ರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನ ನೀಡುವ ಮೂಲಕ ಇತಿಹಾಸ ನಿರ್ಮಿಸಿದರು.
ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅವರು 87.58 ಮೀಟರ್ ದೂರ ಎಸೆದರು ಮತ್ತು ಜಪಾನಿನ ನೆಲದಲ್ಲಿ ಭಾರತದ ಧ್ವಜವನ್ನು ಚಿನ್ನದ ಜೊತೆ ಹಾರಿಸಿದರು. ಈ ಹಿನ್ನೆಲೆಯಲ್ಲಿ, ‘ರನ್ ಕ್ವೀನ್’ ಪಿ.ಟಿ ಉಷಾ ನೀರಜ್ ಅವರು ಚೋಪ್ರಾ ಅವರೊಂದಿಗೆ ಅಭಿನಂದನೆ ಸಲ್ಲಿಸುತ್ತಿರುವ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. “37 ವರ್ಷಗಳ ನಂತರ ನನ್ನ ಕನಸು ನನಸಾಗಿದೆ. ಧನ್ಯವಾದಗಳು ಬೇಟಾ. ನಾನು ಸಾಧಿಸದಿದ್ದರೇನಂತೆ? ಒಬ್ಬ ಭಾರತೀಯನಾಗಿ, ನೀವು ಅದನ್ನು ಮಾಡಿ ತೋರಿಸಿದ್ದೀರಿ ”ಎಂದು ಅವರು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಪಿ.ಟಿ ಉಷಾ ಅವರ ಈ ಟ್ವೀಟ್ ಕ್ರೀಡಾಪ್ರಿಯರ ಹೃದಯ ಗೆದ್ದಿದೆ.
PublicNext
08/08/2021 12:01 pm