ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಲಿಂಪಿಕ್ ಗಾಲ್ಫ್ ನಲ್ಲಿ ಕನ್ನಡತಿ ಕಮಾಲ್ : 4ನೇ ಸ್ಥಾನಕ್ಕೆ ತೃಪ್ತಿಪಟ್ಟ ಅದಿತಿ

ಟೋಕಿಯೊ: 23 ವರ್ಷದ ಕರ್ನಾಟಕದ ಕುವರಿ ಅದಿತಿ ಅಶೋಕ್ ಮೊದಲ ಬಾರಿಗೆ ಒಲಿಂಪಿಕ್ಸ್ ನ ಗಾಲ್ಫ್ ಕೋರ್ಟ್ ನಲ್ಲಿ ಭಾರತದ ಹೆಸರನ್ನು ಮೆರೆಸಿದ್ದಾರೆ. ಪದಕ ಗೆಲ್ಲಲು ವಿಫಲರಾದರೂ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆರಂಭಿಕ ಮೂರೂ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅದಿತಿ ಇಂದಿನ ಪಂದ್ಯದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು.

ಕೊನೆಯ ಸುತ್ತಿನಲ್ಲಿ ಅದಿತಿ ಪದಕ ತಪ್ಪಿಸಿಕೊಂಡರು. ನ್ಯೂಜಿಲ್ಯಾಂಡ್ ನ ಲಿಡಿಯಾ ಕೊ ಅವರು ಬರ್ಡಿ ಹೊಡೆತದಲ್ಲಿ (ನಿಗದಿತ ಸ್ಟ್ರೋಕ್ ಗಿಂತ ಒಂದು ಹೆಜ್ಜೆ ಮೊದಲು) ಗುಳಿಯೊಳಗೆ ಚೆಂಡನ್ನು ಹಾಕಿದರು. ಇದರಿಂದ ಅದಿತಿ ಅಶೋಕ್ ನಾಲ್ಕನೇ ಸ್ಥಾನಕ್ಕೆ ಕುಸಿಯಬೇಕಾಯಿತು.

Edited By : Nirmala Aralikatti
PublicNext

PublicNext

07/08/2021 11:03 am

Cinque Terre

58.17 K

Cinque Terre

8

ಸಂಬಂಧಿತ ಸುದ್ದಿ