ಶುಕ್ರವಾರ ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವೆ ಆಡಿದ ಕಂಚಿನ ಪದಕ ಪಂದ್ಯವು ಭಾರತ ತಂಡದೊಂದಿಗೆ ತನ್ನ ಕೊನೆಯ ಪಂದ್ಯವಾಗಿದೆ ಎಂದು ಹೇಳಿದ ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ತರಬೇತುದಾರ ಜೋರ್ಡ್ ಮರಿಜ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಕಂಚಿನ ಪದಕದ ಪಂದ್ಯದಲ್ಲಿ ಭಾರತ 4-3ರಿಂದ ಸೋತಿತು. ಪಂದ್ಯದ ನಂತರ, ಜೋರ್ಡ್ ಮರಿಜ್ನೆ, ಇದು ಭಾರತೀಯ ಮಹಿಳಾ ತಂಡದೊಂದಿಗಿನ ನನ್ನ ಕೊನೆಯ ಪಂದ್ಯವಾಗಿದೆ ಎಂದು ಹೇಳಿಕೆ ನೀಡಿದ್ದರು. ಜೋರ್ಡ್ ಮರಿಜ್ನೆ ಮತ್ತು ತಂಡದ ವಿಶ್ಲೇಷಣಾತ್ಮಕ ತರಬೇತುದಾರ ಸ್ಕೋಪ್ ಮನ್ ಗೆ ಒಪ್ಪಂದವನ್ನು ವಿಸ್ತರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಮುಂದಾಗಿದೆ ಎಂಬ ವರದಿಗಳಿವೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ಜೋರ್ಡ್ ಮರಿಜ್ನೆ ಈ ಒಪ್ಪಂದಕ್ಕೆ ಒಲ್ಲೆ ಎಂದಿದ್ದಾರೆ.
ಜೋರ್ಡ್ ಮರಿಜ್ನೆ ಬದಲು ಸ್ಕೋಪ್ ಮ್ಯಾನ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಬಹುದು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
PublicNext
06/08/2021 06:07 pm