ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಲ್ಕು ದಶಕಗಳ ನಂತರ ಭಾರತ ಹಾಕಿ ತಂಡಕ್ಕೆ ಪದಕ: ಐತಿಹಾಸಿಕ ಸಾಧನೆ

ಟೋಕಿಯೊ: ಭಾರತದ ಹಾಕಿ ತಂಡಕ್ಕೆ ಇದು ಐತಿಹಾಸಿಕ ದಿನ. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್ ಪುರುಷ ಹಾಕಿ ತಂಡ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಜರ್ಮನಿ ತಂಡದ ವಿರುದ್ಧ ನಡೆದ ರಣರೋಚಕ ಪಂದ್ಯದಲ್ಲಿ ಗೋಲುಗಳ ಸುರಿಮಳೆಯೇ ಆಗಿತ್ತು. ಪಂದ್ಯದಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಈಗ 41 ವರ್ಷಗಳ ಬಳಿಕ ಮತ್ತೆ ಪದಕ ಗೆದ್ದ ಸಾಧನೆ ಮಾಡಿದೆ.

Edited By : Nagaraj Tulugeri
PublicNext

PublicNext

05/08/2021 09:05 am

Cinque Terre

61.89 K

Cinque Terre

23

ಸಂಬಂಧಿತ ಸುದ್ದಿ