ಟೋಕಿಯೊ: ಆಟಗಾರರಿಗೆ ಕ್ರೀಡಾಸ್ಫೂರ್ತಿ, ಪರಸ್ಪರ ಗೌರವಿಸುವ ಗುಣ ಇರಬೇಕು. ಇದೆಲ್ಲವನ್ನೂ ಮೀರಿದ ಮಾನವೀಯತೆ ಪ್ರಸಂಗವೊಂದು ಟೋಕಿಯೋ ಒಲಿಂಪಿಕ್ಸ್‌ನ ಎತ್ತರ ಜಿಗಿತದ ಫೈನಲ್ ಪಂದ್ಯದಲ್ಲಿ ನಡೆದಿದೆ.
ಹೌದು. ಎತ್ತರ ಜಿಗಿತದ ಫೈನಲ್‌ನಲ್ಲಿ ಇಟಲಿಯ ಜಿಯಾನ್ಮಾರ್ಕೊ ತಂಬ್ರಿ ಮತ್ತು ಕತಾರ್‌ನ ಕ್ರೀಡಾಪಟು ಮುತಾಜ್ ಎಸ್ಸಾ ಬಾರ್ಶಿಮ್ ಇಬ್ಬರೂ 2.37 ಮೀಟರ್ ಜಿಗಿದು ಒಟ್ಟಿಗೆ ಮೊದಲ ಸ್ಥಾನ ಪಡೆದರು. ಇದರ ನಂತರ ಸ್ಪರ್ಧೆಯ ಅಧಿಕಾರಿಗಳು ಇಬ್ಬರಿಗೂ ತಲಾ ಮೂರು ಜಿಗಿತಗಳನ್ನು ನೀಡಿದರು. ಈ ಮೂರು ಜಿಗಿತಗಳಲ್ಲಿ ಇಬ್ಬರೂ 2.37 ಮೀಟರ್ ಮೀರಲು ಸಾಧ್ಯವಾಗಲಿಲ್ಲ.
ಮೂರು ಹೆಚ್ಚುವರಿ ಜಿಗಿತಗಳ ನಂತರ ವಿಜೇತರನ್ನು ನಿರ್ಧರಿಸದಿದ್ದಾಗ, ಅಧಿಕಾರಿಗಳು ಇನ್ನೊಂದು ಬಾರಿ ಜಿಗಿಯಲು ಕೇಳಿದರು. ಆದರೆ ಆ ಹೊತ್ತಿಗೆ ಇಟಾಲಿಯನ್ ಕ್ರೀಡಾಪಟು ತಂಬ್ರಿ ಅವರು ಕಾಲಿನ ಗಾಯದಿಂದಾಗಿ ಹಿಂದೆ ಸರಿದರು. ಆಗ ಬಾರ್ಶಿಮ್ ಉತ್ತಮ ಜಂಪ್ ಮಾಡುವ ಮೊದಲೇ ಚಿನ್ನವನ್ನು ತೆಗೆದುಕೊಳ್ಳುವ ಅವಕಾಶವನ್ನು ಹೊಂದಿದ್ದರು.
ಆದರೆ ಬಾರ್ಶಿಮ್ ಅವರು, ತಾವು ಸಹ ಜಿಗಿತದಿಂದ ಹಿಂತೆಗೆದುಕೊಂಡರೆ ಏನಾಗುತ್ತದೆ ಎಂದು ಅಧಿಕಾರಿಯನ್ನು ಕೇಳಿದರು. ಅಧಿಕಾರಿಯು, ನಿಯಮ ಪುಸ್ತಕವನ್ನು ಪರಿಶೀಲಿಸಿದ ಬಳಿಕ, ಹೀಗೆ ಆದಲ್ಲಿ ನಾವು ನಿಮ್ಮಿಬ್ಬರಿಗೂ ಚಿನ್ನವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು. ತಕ್ಷಣವೇ ಬಾರ್ಶಿಮ್ ಕೊನೆಯ ಜಿಗಿತದಿಂದ ಹಿಂದೆ ಸರಿದರು. ಆಗ ಇಟಲಿಯ ಜಿಯಾನ್ಮಾರ್ಕೊ ತಂಬ್ರಿ ಓಡಿ ಬಂದು ಬ್ಯಾರಿಸಮ್ ಅವರನ್ನು ಅಪ್ಪಿಕೊಂಡು ಸಂಭ್ರಮಿಸಿದರು.
ಹೀಗಾಗಿ ಇಟಲಿಯ ಜಿಯಾನ್ಮಾರ್ಕೊ ತಂಬ್ರಿ ಮತ್ತು ಕತಾರ್‌ನ ಕ್ರೀಡಾಪಟು ಮುತಾಜ್ ಎಸ್ಸಾ ಬಾರ್ಶಿಮ್ ಇಬ್ಬರಿಗೂ ಚಿನ್ನದ ಪದಕ ನೀಡಲಾಯಿತು. ಬಾರ್ಶಿಮ್ ಅವರ ನಡೆಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
PublicNext
02/08/2021 10:45 pm