ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೋಕಿಯೊ ಒಲಂಪಿಕ್ಸ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ತಂಡ

ಟೋಕಿಯೊ: ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ಬಳಿಕ ನಾಕೌಟ್ ಗೇರಿದ ಭಾರತದ ಮಹಿಳಾ ಹಾಕಿ ತಂಡ ವಿಜಯದ ಪತಾಕೆ ಹಿಡಿಯುವ ತವಕದಲ್ಲಿದೆ. ಭಾರತದ ಮಹಿಳಾ ಹಾಕಿ ತಂಡಕ್ಕೆ ಐರ್ಲೆಂಡ್ ಸೋಲು ಅದೃಷ್ಟ ತಂದಿಟ್ಟಿದೆ. ಇಂದು ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಸೋತ್ತಿರುವುದು ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಸಾಧ್ಯವಾಗಿದೆ.

ಕ್ವಾರ್ಟರ್ ಫೈನಲ್ ನಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಇನ್ನು ಭಾರತ ಮಹಿಳಾ ಹಾಕಿ ತಂಡ ಮೂರನೇ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ವಂದನಾ ಕಟಾರಿಯಾ (4, 17, 49ನೇ ನಿಮಿಷ) ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದರು..

ರಾಣಿ ರಾಂಪಾಲ್ ಪಡೆ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 4-3ರಿಂದ ಸೋಲಿಸಿತು. 1980ರಲ್ಲಿ ಕೊನೆಯದಾಗಿ ಸೆಮೀಸ್ ಗೇರಿದ್ದ ಮಹಿಳಾ ಹಾಕಿ ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಂತರ 2016ರ ಒಲಿಂಪಿಕ್ಸ್ ನಲ್ಲಷ್ಟೇ ಆಡಿದ್ದ ಮಹಿಳಾ ಹಾಕಿ ತಂಡ ನಾಕೌಟ್ ಗೇರಲು ಯಶಸ್ವಿಯಾಗಿರಲಿಲ್ಲ.

Edited By : Nirmala Aralikatti
PublicNext

PublicNext

31/07/2021 09:50 pm

Cinque Terre

67.36 K

Cinque Terre

0