ಕೊಲಂಬೋ: ಟೀಂ ಇಂಡಿಯಾ ಆಲ್‌ರೌಡರ್ ಕೃನಾಲ್ ಪಾಂಡ್ಯಗೆ ಕೊರೊನಾ ದೃಢಪಟ್ಟ ಬೆನ್ನಲ್ಲೆ ಭಾರತದ ಮತ್ತಿಬ್ಬರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
ಕೃನಾಲ್ ಪಾಂಡ್ಯ ಅವರ ಪ್ರಾಥಮಿಕ ಸಂಪರ್ಕಿತರಾಗಿದ್ದ ಆಲ್ರೌಂಡರ್ ಕೆ.ಗೌತಮ್ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ನಿನ್ನೆ (ಗುರುವಾರ) ನಡೆಸಿದ ಆರ್‌ಟಿ-ಪಿಸಿಆರ್ ಟೆಸ್ಟ್ನಲ್ಲಿ ಸೋಂಕು ದೃಢಪಟ್ಟಿದೆ.
ಕೃನಾಲ್ ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಆಟಗಾರರ ಪೈಕಿ ಗೌತಮ್ ಮತ್ತು ಚಹಲ್ ಕೂಡ ಐಸೋಲೇಷನ್ಗೆ ಒಳಗಾಗಿದ್ದರು. ಹಾಗಾಗಿ ಇಬ್ಬರೂ ಶ್ರೀಲಂಕಾ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಈ ಇಬ್ಬರ ಜೊತೆಗೆ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ದೀಪಕ್ ಚಹಾರ್ ಮತ್ತು ಇಶಾನ್ ಕಿಶನ್ ಕೂಡ ಐಸೋಲೇಷನ್ಗೆ ಒಳಗಾಗಿದ್ದರು.
PublicNext
30/07/2021 01:55 pm