ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಡು ಪ್ಲೆಸಿಸ್

ಜೊಹಾನ್ಸ್ಬರ್ಗ್: ಸೀಮಿತ ಓವರ್ ಗಳ ಕ್ರಿಕೆಟ್ ನತ್ತ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್ ಬುಧವಾರ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. “ಈ ವರ್ಷ ಎಲ್ಲರಿಗೂ ಬಹಳ ಕಠಿನ ಹಾಗೂ ಸವಾಲಿನದಾಗಿತ್ತು. ಅನೇಕ ಗೊಂದಲ ಕಾಡಿದ್ದು ನಿಜ. ಆದರೆ ನನಗಂತೂ ಹಲವು ವಿಚಾರಗಳಲ್ಲಿ ಸ್ಪಷ್ಟತೆ ಸಿಕ್ಕಿದೆ. ನನ್ನ ಮನಸ್ಸು ನಿರಾಳವಾಗಿದ್ದು, ವೃತ್ತಿ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲು ಇದು ಸೂಕ್ತ ಸಮಯ. ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ದೇಶದ ಪರ ಆಡುವ ಅವಕಾಶ ಸಿಕ್ಕಿದ್ದು ಬಹು ದೊಡ್ಡ ಗೌರವ. ಆದರೆ ನನ್ನ ಸಮಯ ಬಂದಾಗಿದೆ. ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ’ ಎಂದು ಡು ಪ್ಲೆಸಿಸ್ ತಮ್ಮ ಇನ್ ಸ್ಟಾಮ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿ ನಿವೃತ್ತಿ ಸಾರಿದ್ದಾರೆ.

“ಮುಂದಿನ ಎರಡೂ ವರ್ಷಗಳಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಗಳು ನಡೆಯಲಿವೆ. ಹೀಗಾಗಿ ಚುಟುಕು ಮಾದರಿಯ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ನೀಡಲಿದ್ದೇನೆ. ಚುಟುಕು ಮಾದರಿಯಲ್ಲಿ ತಂಡಕ್ಕೆ ಹೆಚ್ಚಿನ ಸೇವೆ ಒದಗಿಸಬಲ್ಲ ಸಾಮರ್ಥ್ಯ ನನ್ನಲ್ಲಿ ಇನ್ನೂ ಇದೆ. ಇದರರ್ಥ ಏಕದಿನ ಕ್ರಿಕೆಟ್ ನಿಂದ ದೂರ ಉಳಿಯಲಿದ್ದೇನೆ ಎಂದಲ್ಲ. ಸದ್ಯಕ್ಕೆ ಟಿ20 ಕ್ರಿಕೆಟ್ ಗೆ ಮೊದಲ ಆದ್ಯತೆ ನೀಡಿದ್ದೇನೆ’ ಎಂದು ಡು ಪ್ಲೆಸಿಸ್ ಹೇಳಿದರು. 36ರ ಹರೆಯದ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ಪರ 69 ಟೆಸ್ಟ್ ಪಂದ್ಯಗಳನ್ನಾಡಿ 4,163 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಸೇರಿದೆ. 190 ರನ್ ಅತ್ಯುತ್ತಮ ಸಾಧನೆ. ನಾಯಕನಾಗಿ 36 ಪಂದ್ಯಗಳನ್ನು ಮುನ್ನಡೆಸಿದ್ದು, 18 ಪಂದ್ಯಗಳಲ್ಲಿ ತಂಡ ಗೆಲುವು ಕಂಡಿದೆ.

Edited By : Nirmala Aralikatti
PublicNext

PublicNext

17/02/2021 11:17 pm

Cinque Terre

56.17 K

Cinque Terre

0

ಸಂಬಂಧಿತ ಸುದ್ದಿ