ಮುಂಬೈ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ 2021 ಆವೃತ್ತಿಯ ಟೂರ್ನಿಗೆ ಬಿಸಿಸಿಐ ಹರಾಜಿನಲ್ಲಿ ಒಟ್ಟು 292 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ.
ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ಒಟ್ಟು 1,114 ಆಟಗಾರರು ಮಿನಿ ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ 8 ಫ್ರಾಂಚೈಸಿಗಳು ತಮ್ಮ ಆದ್ಯತೆಯ ಹೆಸರುಗಳನ್ನು ಸೂಚಿಸಿದ್ದರು. ಈ ಪೈಕಿ 292 ಆಟಗಾರರನ್ನು ಹರಾಜಿಗೆ ಬಿಸಿಸಿಐ ಅಂತಿಮಗೊಳಿಸಿದೆ.
ಈ ಬಾರಿಯ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಎಡಗೈ ಸ್ಪಿನ್ ಬೌಲರ್ ನೂರ್ ಅಹ್ಮದ್ ಅತ್ಯಂತ ಕಿರಿಯ (16ನೇ ವಯಸ್ಸು) ಆಟಗಾರರಾಗಿದ್ದರೆ, ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ದೋಶಿ ಅವರ 42 ವರ್ಷದ ಮಗ ನಯನ್ ದೋಶಿ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ.
PublicNext
12/02/2021 03:04 pm