ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಪುತ್ರನ ಹೆಸರು..!

2021 ರ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಹೆಸರು ಕಾಣಿಸಿಕೊಂಡಿದೆ.

ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. 21 ವರ್ಷದ ಅರ್ಜುನ್ ಮೂಲ ಬೆಲೆ 20 ಲಕ್ಷ ರೂ. ಘೋಷಿಸಿಕೊಂಡಿದ್ದು, ಚೊಚ್ಚಲ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ. ಈ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯುವ ಮೂಲಕ ಅರ್ಜುನ್ ಐಪಿಎಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

2021ರ ಐಪಿಎಲ್ ಹರಾಜಿಗೆ ಒಟ್ಟು 1097 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 814 ಮಂದಿ ಭಾರತೀಯ ಆಟಗಾರರಾದರೆ, 283 ಜನ ವಿದೇಶಿ ಕ್ರಿಕೆಟಿಗರು. ಇನ್ನು 1097 ಮಂದಿ ಆಟಗಾರರಲ್ಲಿ 207 ಮಂದಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರರಿದ್ದಾರೆ. ಅಲ್ಲದೆ 863 ಮಂದಿ ಅನ್ ಕ್ಯಾಪ್ಡ್ ಆಟಗಾರರು. ಹಾಗೆಯೇ ಈ ಪಟ್ಟಿಯಲ್ಲಿ 186 ಮಂದಿ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರರಿದ್ದಾರೆ.

Edited By : Nirmala Aralikatti
PublicNext

PublicNext

06/02/2021 08:00 am

Cinque Terre

74.24 K

Cinque Terre

3

ಸಂಬಂಧಿತ ಸುದ್ದಿ