ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ 2018ರಿಂದ ಟೀಮ್ ಇಂಡಿಯಾ ಪರವಾಗಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಭಾರತದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ ಈವರೆಗೆ ಭಾರತದ ಪರವಾಗಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನೇ ಆಡಿರಲಿಲ್ಲ ಎಂಬುವುದು ಕುತೂಹಲಕಾರಿ ಸಂಗತಿ.
ಹೌದು, ಜಸ್ಪ್ರೀತ್ ಬೂಮ್ರಾಗೆ ಇಂಗ್ಲಂಡ್ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಭಾರತದದ ನೆಲದಲ್ಲಿ ಆಡುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ.
17 ಟೆಸ್ಟ್ ಪಂದ್ಯಗಳಲ್ಲಿ ಬೂಮ್ರಾ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರೂ ಅದೆಲ್ಲವೂ ವಿದೇಶಿ ನೆಲದಲ್ಲೇ ಆಗಿದೆ. ಹಾಗಾಗಿ ಬೂಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಭಾರತದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ.
PublicNext
05/02/2021 01:52 pm