ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2021ರ IPL ಆಟಗಾರರ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್

ಐಪಿಎಲ್ 2021ರ ಹರಾಜು ಪ್ರಕ್ರಿಯೆಗೆ ಫೆ.18 ರಂದು ಮುಹೂರ್ತ ಫಿಕ್ಸ್ ಆಗಿರುವುದನ್ನು ಬಿಸಿಸಿಐ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಇಂಗ್ಲೆಂಡ್ ವಿರುದ್ಧ ಮೊದಲ ಹಾಗೂ ಎರಡನೇ ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ.

ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17ರಂದು ಕೊನೆಗೊಳ್ಳಲಿದೆ. ಎರಡನೇ ಟೆಸ್ಟ್ ಮುಕ್ತಾಯಗೊಂಡ ಮರುದಿನ ಐಪಿಎಲ್ ಹರಾಜು ನಡೆಯಲಿದೆ.ಆಟಗಾರರನ್ನು ಉಳಿಸಿಕೊಳ್ಳಲು ಜನವರಿ 20 ಕೊನೆಯ ದಿನವಾಗಿತ್ತು. ಒಂದು ತಂಡದಿಂದ ಆಟಗಾರರನ್ನು ಇನ್ನೊಂದು ತಂಡಕ್ಕೆ ವರ್ಗಾಯಿಸಲು ಫೆಬ್ರವರಿ 4 ಕೊನೆಯದಿನ.ತಂಡದಿಂದ ಹೊರಬಿದ್ದ ಆಟಗಾರರ ಪಟ್ಟಿಯಲ್ಲಿ ಸ್ಟಿವ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಸೇರಿದ್ದಾರೆ.

2021ರ ಐಪಿಎಲ್ ಹರಾಜು ಪ್ರಕ್ರಿಯೆ ಹೆಚ್ಚು ಕುತೂಹಲಕರವಾಗಿರಲಿದೆ. ರಾಜಸ್ತಾನ ರಾಯಲ್ಸ್ ತಮ್ಮ ತಂಡದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಬಿಡುಗಡೆ ಮಾಡಿದೆ. ಹಾಗೆ ಟಿ-20 ದಿಗ್ಗಜ ಗ್ಲೆನ್ ಮ್ಯಾಕ್ಸ್ ಕೂಡ ಹರಾಜಾಗಲಿದ್ದಾರೆ. ಯಾವ ತಂಡ, ಯಾವ ಆಟಗಾರರನ್ನು ಎಷ್ಟು ಮೊತ್ತಕ್ಕೆ ಖರೀದಿ ಮಾಡಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿದೆ.

Edited By : Nirmala Aralikatti
PublicNext

PublicNext

27/01/2021 03:28 pm

Cinque Terre

47.09 K

Cinque Terre

0

ಸಂಬಂಧಿತ ಸುದ್ದಿ