ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವದ ಬದಲಾವಣೆ: ಫೆ11 ಕ್ಕೆ ಐಪಿಎಲ್ ಹಾರಾಜು

ಬೆಂಗಳೂರು: ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕತ್ವವನ್ನು ಸಂಜು ಸ್ಯಾಮ್ಸನ್‌ ಮುನ್ನಡೆಸಲಿದ್ದಾರೆ. ಇದು ಐಪಿಎಲ್ ಆಸಕ್ತ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ತಂದಿದೆ.

ಭಾರತದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕಳ್ಳಾಟವಾಡಿ ಟೀಕೆಗೆ ಗುರಿಯಾಗಿದ್ದ ಸ್ವೀವ್ ಸ್ಮಿತ್‌ ಅವರನ್ನು ತಂಡದಿಂದಲೇ ಕೈಬಿಟ್ಟು ಸಂಜು ಸಾಮ್ಸನ್‌ಗೆ ರಾಜಸ್ಥಾನ ತಂಡ ಹೊಣೆಗಾರಿಕೆ ನೀಡಿದೆ. ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಮಾಜಿ ನಾಯಕ ಸಂಗಕ್ಕಾರ ಅವರನ್ನು ನೇಮಿಸಲಾಗಿದೆ.

ಐಪಿಎಲ್‌ನಲ್ಲಿ ಉಳಿಸಿಕೊಳ್ಳಲಿರುವ ಆಟಗಾರರ ವಿವರವನ್ನು ಇಂದು ತಂಡಗಳು ಪ್ರಕಟಿಸಿವೆ. ಈ ಪೈಕಿ ಮುಂಬೈ ತಂಡ ಲಸಿತ್‌ ಮಾಲಿಂಗ, ಚೆನ್ನೈ ತಂಡ ಹರ್ಭಜನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

ಎಲ್ಲ 8 ತಂಡಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಬೇಕಿದ್ದು, ತಂಡದಿಂದ ಕೈ ಬಿಟ್ಟ ಆಟಗಾರರ ಹರಾಜು ಪ್ರಕ್ರಿಯೆ ಫೆ.11 ರಂದು ನಡೆಯಲಿದೆ.

Edited By : Nagaraj Tulugeri
PublicNext

PublicNext

21/01/2021 12:19 pm

Cinque Terre

54.84 K

Cinque Terre

0