ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs AUS ಟೆಸ್ಟ್: ಸರಣಿ ಗೆದ್ದ ಭಾರತ!

ಬ್ರಿಸ್ಬೇನ್ : ಮಂಗಳವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ ಸರಣಿಯನ್ನು ಮುಡಿಗೇರಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಇಂದು ಸರಣಿ ವಶಪಡಿಸಿಕೊಂಡಿದೆ.

ಹೌದು, ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಡಿಸೆಂಬರ್ 19ರಂದು ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತವು ಕೇವಲ 36 ರನ್ ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಇದುವರೆಗೆ ಭಾರತವು ಒಂದು ಇನ್ನಿಂಗ್ಸ್ ನಲ್ಲಿ ಗಳಿಸಿದ ಕನಿಷ್ಠ ಮೊತ್ತ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಯಾವೊಬ್ಬ ಬ್ಯಾಟ್ಸ್ ಮನ್ ಸಹ ಎರಡಂಕಿ ತಲುಪಿರಲಿಲ್ಲ.

ಭಾರತದ ಈ ಕಳಪೆ ಸಾಧನೆಗೆ ಮಾಜಿ ಕ್ರಿಕೆಟಿಗರೂ ಸೇರಿದಂತೆ ಅಭಿಮಾನಿಗಳ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಹೀನಾಯ ಸೋಲಿನ ಬಳಿಕ ಸ್ಟ್ರಾಂಗ್ ಆದ ಟೀಮ್ ಇಂಡಿಯಾ ಎಲ್ಲ ಸಮಸ್ಯೆ–ಸವಾಲುಗಳನ್ನು ಮೆಟ್ಟಿ ನಿಂತು ಇದೀಗ ‘ಗಾಬಾ’ದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸಿರಾಜ್ ಅವರ ಬೌಲಿಂಗ್, ಪಂತ್ ಹಾಗೂ ಗಿಲ್ ದಿಟ್ಟ ಬ್ಯಾಟಿಂಗ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

Edited By : Nirmala Aralikatti
PublicNext

PublicNext

19/01/2021 04:16 pm

Cinque Terre

70.99 K

Cinque Terre

15

ಸಂಬಂಧಿತ ಸುದ್ದಿ