ಸಿಡ್ನಿ: ಇಲ್ಲಿನ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾಗೆ 407 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 94 ರನ್ ಹಿನ್ನಡೆ ಅನುಭವಿಸಿರುವ ಭಾರತ ತಂಡ ಈ ಪಂದ್ಯ ಗೆಲ್ಲಬೇಕಾದರೆ 407 ರನ್ ಗಳಿಸಬೇಕಿದೆ. ಡ್ರಾ ಮಾಡಿಕೊಳ್ಳಲು 138 ಓವರ್ ಆಡಬೇಕಿದೆ.
ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ ಮತ್ತು ಗ್ರೀನ್ ಅರ್ಧಶತಕ ಸಿಡಿಸಿ ಮಿಂಚಿದರು. ಲಬುಶೇನ್ 73 ರನ್ ಗಳಿಸಿದರೆ, ಸ್ಮಿತ್ 81 ರನ್ ಗಳಿಸಿದರು. ವೇಗವಾಗಿ ಬ್ಯಾಟ್ ಬೀಸಿದ ಗ್ರೀನ್ ನಾಲ್ಕು ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ನಾಯಕ ಪೇನ್ ಅಜೇಯ 39 ರನ್ ಗಳಸಿದರು. ಗ್ರೀನ್ ಔಟಾಗುತ್ತಿದ್ದಂತೆ ಆಸೀಸ್ ಡಿಕ್ಲೇರ್ ಮಾಡಿಕೊಂಡಿತು.
ಟೀಂ ಇಂಡಿಯಾ ಪರ ಯುವ ಬೌಲರ್ ನವದೀಪ್ ಸೈನಿ ಮತ್ತು ಅನುಭವಿ ಆರ್.ಅಶ್ವಿನ್ ತಲಾ ಎರಡು ವಿಕೆಟ್ ಪಡೆದರೆ, ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
PublicNext
10/01/2021 11:33 am