ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್- ವಿಡಿಯೋ ವೈರಲ್!

ಸಿಡ್ನಿ: ಟೀಂ ಇಂಡಿಯಾ ಸ್ಟಾರ್‌ ಆಲ್‌ರೌಂಡರ್ ರವೀಂದ್ರ ಜಡೇಜಾ ಪ್ರಸ್ತುತ ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಸ್ಟೀವನ್‌ ಸ್ಮಿತ್‌ ಅವರನ್ನು ರನೌಟ್ ಮಾಡುವ ಮೂಲಕ ಮತ್ತೊಮ್ಮೆ ಇದನ್ನು ಸಾಬೀತುಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ. ಆದರೂ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಿಂಚಿನ ವೇಗದ ಥ್ರೋಗೆ ಸ್ಮಿತ್ ರನೌಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಜಡೇಜಾ ಬೌಂಡರಿ ಗೆರೆಯಿಂದ ಓಡಿ ಬಂದು ಚೆಂಡನ್ನು ನೇರವಾಗಿ ವಿಕೆಟ್‌ಗೆ ಹೊಡೆದರು. ಎರಡನೇ ರನ್ ಪಡೆಯುವ ಆತುರದಲ್ಲಿದ್ದ ಸ್ಮಿತ್ ಡೈವ್ ಮಾಡಿದರೂ ವಿಕೆಟ್‌ ಕಳೆದುಕೊಂಡರು. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 338 ರನ್‌ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 244 ರನ್ ಗಳಿಗೆ ಸರ್ವಪತನ ಕಂಡಿತು. ಮೂರನೇ ದಿನದ ಅಂತ್ಯಕ್ಕೆ ಆಸೀಸ್ ಪಡೆಯು 2 ವಿಕೆಟ್ ನಷ್ಟಕ್ಕೆ 103 ಪೇರಿಸಿದ್ದು ನಾಳೆ ನಾಲ್ಕನೇ ದಿನದಾಟವನ್ನು ಪ್ರಾರಂಭಿಸಲಿದೆ.

Edited By : Vijay Kumar
PublicNext

PublicNext

09/01/2021 04:39 pm

Cinque Terre

51.11 K

Cinque Terre

0

ಸಂಬಂಧಿತ ಸುದ್ದಿ