ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೊಚ್ಚಲ ಪಂದ್ಯದಲ್ಲಿಯೇ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಆರ್ ಸಿ ಬಿ

ದುಬೈ: 3 ನೇ ಐಪಿಎಲ್ ಪಂದ್ಯಾಟದಲ್ಲಿ ಆರ್ ಸಿ ಬಿ ತಂಡ ಸನ್ ರೈಸರ್ಸ್ ವಿರುದ್ಧ 10 ರನ್ ಗಳಿಂದ ಜಯಗಳಿಸುವುರೊಂದಿಗೆ ಅಭಿಮಾನಿಗಳ ಮನ ಗೆದ್ದಿದೆ.

ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ಆರ್ ಸಿ ಬಿಯ ಆರಂಭಿಕ ಆಟಗಾರರು ಪಡಿಕ್ಕಲ್ ಮತ್ತು ಫಿಂಚ್ ಮೊದಲ ವಿಕೆಟ್ ಗೆ ಹತ್ತು ಓವರ್ ಗಳಲ್ಲಿ 90 ರನ್ ಗಳ ಜೊತೆಯಾಟ ನೀಡಿದರು.

ಕರ್ನಾಟಕದ ದೇವದತ್ತ ಪಡಿಕ್ಕಲ್ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದರು.

ನಂತರ ಬಂದ ಕೊಹ್ಲಿ ಬಹು ಬೇಗ ಮರಳಿ ಪೇವಿಲಿಯನ್ ತ್ತ ಮುಖ ಮಾಡಿದ್ರು.

ಎಬಿಡಿ ಮಿಂಚಿನ ಅರ್ಧ ಶತಕ ಗಳಿಸಿದಲ್ಲದೆ ತಂಡದ ಮೊತ್ತವನ್ನು 150 ರ ಗಡಿದಾಟಿಸಿದರು.

ಕೊನೆಗೆ ತನ್ನ ಇಪ್ಪತ್ತು ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ನು ಗಳಿಸಲಷ್ಟೇ ಶಕ್ತವಾಯಿತು.

ಸಾಧಾರಣ ಮೊತ್ತದ ಬೆನ್ನಟ್ಟಿದ ಸನ್ ರೈಸರ್ಸ್ ಜೊನ್ನಿ ಬೈರ್ಸ್ಟೌ ಅರ್ಧ ಶತಕ ಮತ್ತು ಮನೀಶ್ ಪಾಂಡೆ 34 ರನ್ ಗಳನ್ನು ಸೇರಿಸಿದರು.

ಆದರೆ ಆರ್ ಸಿ ಬಿ ಯಾ ಚಾಹಲ್ ದಾಳಿಗೆ ಮುಗ್ಗರಿಸಿದ ಸನ್ ರೈಸರ್ಸ್ ಆಟಗಾರರು 153 ತನ್ನ ಎಲ್ಲ ವಿಕೆಟ್ ಕಳೆದು ಕೊಂಡು 10 ರನ್ ಗಳ ಸೋಲು ಅನುಭವಿಸಿದೆ.

ಆರ್ ಸಿ ಬಿ ಪರ ಸೈನಿ ಮತ್ತು ದುಬೆ ತಲಾ 2 ವಿಕೆಟ್ ಪಡೆದರು.

Edited By : Nirmala Aralikatti
PublicNext

PublicNext

22/09/2020 07:20 am

Cinque Terre

60.26 K

Cinque Terre

2

ಸಂಬಂಧಿತ ಸುದ್ದಿ