ಲಂಡನ್: ರಷ್ಯಾ ಹಾಗೂ ಬೆಲಾರೂಸ್ ದೇಶಗಳ ಆಟಗಾರರನ್ನ ನಿಷೇಧಿಸಲಾಗಿದೆ. ಮುಂಬರೋ ವಿಂಬಲ್ಡನ್ ಟೆನ್ನಿಸ್ ಟೋರ್ನಿಯಲ್ಲಿ ಆಡದಂತೆ ಈಗ ನಿರ್ಬಂಧ ಹೇರಲಾಗಿದೆ.
ಫೆಬ್ರವರಿ-24 ರಂದು ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿತ್ತು. ಅಂದಿನಿಂದ ಇಂದಿನವರೆಗೂ ಯುದ್ಧ ಮುಂದುವರೆಯುತ್ತಿದೆ. ಈ ಸಮಯದಲ್ಲಿಯೇ ರಷ್ಯಾ ದೇಶಕ್ಕೆ ಬೆಲಾರೂಸ್ ಬೆಂಬಲ ನೀಡಿತ್ತು.
ಆದ್ದರಿಂದಲೇ ವಿವಿಧ ಕ್ರೀಡಾ ಕೂಟದಗಳಲ್ಲಿ ಈ ಎರಡೂ ದೇಶದ ಆಟಗರಾರನ್ನ ನಿಷೇಧಿಸಲಾಗಿದೆ. ಆದರೆ ಇವರು IOC ಧ್ವಜದ ಅಡಿ ಸ್ಪರ್ಧಿಸಬಹುದಾಗಿದೆ.
ವಿಂಬಲ್ಡನ್ ಆಯೋಜಕರ ಈ ಒಂದು ನಿರ್ಣಯದಿಂದಲೇ ಹೆಸರಾಂತ ಟೆನ್ನಿಸ್ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಸ್ಪರ್ಧಿಸೋದು ಬಹುತೇಕ ಅನುಮಾನವೇ ಆಗಿದೆ.
PublicNext
20/04/2022 06:14 pm