ದುಬೈ : ಸತತ ಸೋಲಿನಿಂದ ಕಂಗ್ಗೆಟ್ಟಿರುವ ಧೋನಿ ಪಡೆಗೆ ಇಂದಿನ ಪಂದ್ಯದಲ್ಲಿನ ಗೆಲವು ಅನಿವಾರ್ಯವಾದರೆ, ಪಂಚ ಕನ್ನಡಿಗರನ್ನು ಹೊಂದಿರುವ ಪಂಜಾಬ್ ಕೂಡ ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾಗಬೇಕಿದೆ.
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು (ಭಾನುವಾರ) ನಡೆಯಲಿರುವ ದಿನದ ಎರಡನೇ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವ ಪಡೆದಿದೆ.
ಧೋನಿ ಮತ್ತು ಕೆ.ಎಲ್. ರಾಹುಲ್ ನೇತೃತ್ವದ ತಂಡಗಳೆರಡೂ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ.
ಆಡಿದ 4 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು ಮೂರರಲ್ಲಿ ಸೋತಿವೆ.
ಹೀಗಾಗಿ ಇದೊಂದು ಬಿಗ್ ಮ್ಯಾಚ್ ಆಗುವ ಎಲ್ಲ ಸಾಧ್ಯತೆ ಇದೆ. ದಿನದ ಮೊದಲ ಪಂದ್ಯದಲ್ಲಿ ಮುಂಬೈ ಮತ್ತು ಹೈದರಾಬಾದ್ ಮುಖಾಮುಖೀಯಾಗಲಿದೆ.
PublicNext
04/10/2020 07:47 am