ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಆಶಸ್ ಟೆಸ್ಟ್ ಪಂದ್ಯದ ವೇಳೆ ಗಬ್ಬಾದಲ್ಲಿ ಜೋಡಿವೊಂದರ ಪ್ರಪೋಸ್ ಸೀನ್ ವೈರಲ್ ಆಗಿದೆ. ಇಂಗ್ಲೆಂಡ್ ನ ಯುವ ಕ್ರಿಕೆಟ್ ಅಭಿಮಾನಿಯೊಬ್ಬ ಮೈದಾನದ ಹೊರಗೆ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಅದಕ್ಕೆ ಹುಡುಗಿ ಕೂಡಾ ಓಕೆ ಅಂದಿದ್ದಾಳೆ. ಪ್ರಪೋಸಲ್ ಒಪ್ಪಿಕೊಂಡ ಹುಡುಗಿ ತನ್ನ ಬಾಯ್ ಫ್ರೆಂಡ್ ನನ್ನು ಅಪ್ಪಿಕೊಂಡಳು. ನಂತರ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳನ್ನು ಸೆರೆಹಿಡಿದ ಕ್ಯಾಮೆರಾ ದೊಡ್ಡ ಪರದೆಯ ಮೇಲೆ ಭೀತ್ತರಿಸಿ ಯುವ ಜೋಡಿಯನ್ನು ಅಭಿನಂದಿಸಿದೆ. ಹುಡುಗಿಯ ಹೆಸರು ನಟಾಲಿಯಾ ಮತ್ತು ಹುಡುಗನ ಹೆಸರು ರಾಬ್ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
10/12/2021 04:09 pm