ಚಂಢೀಗಡ: ಹೃದಯಾಘಾತದಿಂದ ಭಾರತದ ಶತಾಯುಷಿ ಅಥ್ಲೀಟ್ ಮಾನ್ ಕೌರ್, ಶನಿವಾರ ನಿಧನರಾದರು. ಮಾನ್ ಕೌರ್ ಗೆ 105 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಹಲವು ತಿಂಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಬಳಿಕ ಅವರನ್ನ ಮೊಹಾಲಿಯ ದೆರಾಬಾಸ್ಸಿ ಆಯುರ್ವೇದ ಆಸ್ಪತ್ರೆಗೆ ದಾಖಲಿಸಲಾಗಿತ್ತು' ಎಂದು ಮೃತರ ಪುತ್ರ ಗುರುದೇವ್ ಸಿಂಗ್ ತಿಳಿಸಿದ್ದಾರೆ.
1916, ಮಾರ್ಚ್ 1 ರಂದು ಜನಿಸಿದ ಮಾನ್ ಕೌರ್, 'ಚಂಢೀಗಡದ ಮಿರಾಕಲ್ ಮಾಮ್' ಎಂದೇ ಕರೆಸಿಕೊಂಡಿದ್ದರು. ತಮ್ಮ 93ನೇ ವಯಸ್ಸಿನಲ್ಲಿ ಓಡಲು ಆರಂಭಿಸಿದ ಮಾನ್ ಕೌರ್, 2007ರಲ್ಲಿ ಮೊದಲ ಪದಕ ಜಯಿಸಿದ್ದರು. ಚಂಢೀಗಡದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟದಲ್ಲಿ ಪದಕ ಗೆದ್ದಿದ್ದರು. 2017ರಲ್ಲಿ ಅಕ್ಲೇಂಡ್ ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಗೇಮ್ಸ್ ನನಲ್ಲಿ 100 ಮೀಟರ್ ಓಟದಲ್ಲಿ ಪದಕ ಜಯಿಸಿದ್ದ ಕೌರ್, ಹಲವು ವಿಶ್ವ ದಾಖಲೆ ನಿರ್ಮಿಸಿದ್ದರು.
PublicNext
01/08/2021 08:17 am