ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನದ ಹುಡುಗ ನೀರಜ್ ಗೆ ತೀವ್ರ ಜ್ವರ : ಕಾರ್ಯಕ್ರಮಗಳಿಂದ ದೂರ

ನವದೆಹಲಿ : ಇಡೀ ದೇಶವೇ ಕೊಂಡಾಡಿದ ಚಿನ್ನದ ಹುಡುಗ ಒಲಿಂಪಿಕ್ಸ್ ನಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಜಾವೆಲಿನ್ ಥ್ರೊ ಪಟು ಭಾರತದ ನೀರಜ್ ಚೋಪ್ರಾ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಟೋಕಿಯೊ ಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿ ತವರಿಗೆ ಮರಳಿದ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಅವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ವರದಿ 'ನೆಗೆಟಿವ್' ಬಂದಿದೆ.

23 ವರ್ಷದ ನೀರಜ್, ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎನಿಸಿಕೊಂಡಿದ್ದರು.

'ನೀರಜ್ ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಸದ್ಯಕ್ಕೆ ಯಾವುದೇ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿಲ್ಲ' ಎಂದು ಮೂಲಗಳು ತಿಳಿಸಿವೆ.

ನೀರಜ್ ಸೇರಿದಂತೆ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಎಲ್ಲರನ್ನೂ ಸರ್ಕಾರ ಸೋಮವಾರ ಸನ್ಮಾನಿಸಿತ್ತು. ಮರುದಿನ ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ ಐ) ಕೂಡ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಿತ್ತು. ಗುರುವಾರ ಮತ್ತು ಶುಕ್ರವಾರ ಕ್ರಮವಾಗಿ ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಹಮ್ಮಿಕೊಂಡಿದ್ದ ಎರಡೂ ಕಾರ್ಯಕ್ರಮಗಳಲ್ಲಿ ನೀರಜ್ ಭಾಗವಹಿಸಿರಲಿಲ್ಲ.

Edited By : Nirmala Aralikatti
PublicNext

PublicNext

14/08/2021 09:15 pm

Cinque Terre

77.61 K

Cinque Terre

2