ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಸೇರಿದಂತೆ ಮನೆಯ ಇನ್ನೂ ಮೂವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ.
ಸೌರವ್ ಗಂಗೂಲಿಗೂ ಕಳೆದ ಡಿಸೆಂಬರ್-28 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸೌರವ್ ಚಿಕಿತ್ಸೆಯನ್ನೂ ಪಡೆದಿದ್ದರು.
ಆದರೆ ಈಗ ಪುತ್ರಿ ಸನಾ ಸೇರಿ ಮನೆಯ ಇತರ ಮೂವರು ಸದಸ್ಯರಿಗೆ ಕೊರೊನಾ ಬಂದಿರೋದು ದೃಢಪಟ್ಟಿದೆ.ಮನೆಯಲ್ಲಿಯೇ ಸದ್ಯ ಇವರು ಐಸೋಲೇಷನ್ ನಲ್ಲಿಯೇ ಇದ್ದಾರೆ.
PublicNext
05/01/2022 05:07 pm