ಇಸ್ಲಾಮಾಬಾದ್: ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಬಂದಿಳಿದಿದೆ. ಭಾರೀ ಭದ್ರತೆಯೊಂದಿಗೆ ಕ್ರಿಕೆಟ್ ಆಟಗಾರರು ಪಾಕಿಸ್ತಾನ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಆದರೆ ಈ ಸರಣಿಯ ಆರಂಭಕ್ಕೆ ಮುನ್ನವೇ ವೆಸ್ಟ್ ಇಂಡೀಸ್ ತಂಡಕ್ಕೆ ಕೊರೊನಾ ವೈರಸ್ ಆಘಾತ ನೀಡಿದೆ. ವಿಂಡೀಸ್ ತಂಡ ಮೂವರು ಆಟಗಾರರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.
ವಿಂಡೀಸ್‌ನ ಪೈಕಿ ಶೆಲ್ಡನ್ ಕಾಟ್ರೆಲ್, ರೋಸ್ಟನ್ ಚೇಸ್ ಹಾಗೂ ಕೈಲ್ ಮೇಯರ್ಸ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ ತಂಡದ ಓರ್ವ ಸಿಬ್ಬಂದಿಗೂ ಕೂಡ ಕೊರೊನಾ ವೈರಸ್ ತಗುಲಿದೆ. ಇವರೆಲ್ಲರೂ 10 ದಿನಗಳ ಕಾಲ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಈ ನಾಲ್ವರು ಕೂಡ ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದು, ಯಾವುದೇ ಪ್ರಮುಖ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ವಿಂಡೀಸ್ ಮಂಡಳಿ ಮಾಹಿತಿ ನೀಡಿದೆ.
PublicNext
12/12/2021 01:28 pm