ಕ್ರೈಸ್ಟ್ ಚರ್ಚ್ : ವಿಶ್ವವೇ ಬೆದರಿ ಬೆಂಡಾಗಿರುವ ಡೆಡ್ಲಿ ಸೋಂಕು ಕೊರೊನಾ ಇನ್ನೂ ಕಂಟ್ರೋಲ್ ಗೆ ಬಂದಿಲ್ಲ.
ಹಾಗಾಗಿ ಈ ಬಾರಿಯ ಐಪಿಎಲ್ ಕೂಡಾ ಅಷ್ಟೊಂದು ರೋಚಕತೆಯಿಂದ ನಡೆಸಲು ಸಾಧ್ಯವಾಗಲಿಲ್ಲ ಆದರೆ ಕೋವಿಡ್ ನಿಯಮಾವಳಿಗಳ ಪ್ರಕಾರ ಸುರಕ್ಷಿತವಾಗಿ ಪಂದ್ಯ ಯಶ ಕಂಡಿದೆ.
ಈಗಾ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಪಾಕಿಸ್ಥಾನದ ಏಳನೇ ಆಟಗಾರನಿಗೆ ಕೋವಿಡ್-19 ಸೋಂಕು ದೃಢವಾಗಿದೆ.
ಸದ್ಯ ಪಾಕ್ ತಂಡ ಕ್ರೈಸ್ಟ್ ಚರ್ಚ್ ನ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದು, ಸರಣಿ ರದ್ದಾಗುವ ಭೀತಿ ಎದುರಾಗಿದೆ.
ನ್ಯೂಜಿಲ್ಯಾಂಡ್ ಆರೋಗ್ಯ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಹೋಟೆಲ್ ನಲ್ಲಿರುವ ಪಾಕ್ ತಂಡದ ಏಳನೇ ಸದಸ್ಯನಿಗೆ ಕೋವಿಡ್ ಸೋಂಕು ಪಾಸಿಟಿವ್ ಆಗಿರುವುದು ಇಂದು ದೃಢಪಟ್ಟಿದೆ ಎಂದಿದೆ.
ಪಾಕ್ ತಂಡ ನಾಲ್ಕು ದಿನಗಳ ಹಿಂದೆ ನ್ಯೂಜಿಲ್ಯಾಂಡ್ ಗೆ ಆಗಮಿಸಿದೆ.
ಮೊದಲ ದಿನವೇ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಆರು ಆಟಗಾರರಿಗೆ ಪಾಸಿಟಿವ್ ವರದಿಯಾಗಿತ್ತು.
ಇದೀಗ ಮೂರನೇ ದಿನದ ಟೆಸ್ಟ್ ನಲ್ಲಿ ಮತ್ತೋರ್ವನಿಗೆ ಪಾಸಿಟಿವ್ ವರದಿಯಾಗಿದೆ.
ಡಿಸೆಂಬರ್ 18ರಂದು ಪಾಕ್- ಕಿವೀಸ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ.
ಎರಡು ವಾರಗಳ ಕ್ವಾರಂಟೈನ್ ಮುಗಿದ ಬಳಿಕ ಪಾಕ್ ತಂಡ ಅಭ್ಯಾಸ ನಡೆಸಲಿದೆ.
ಛೀಮಾರಿ: ಕಿವೀಸ್ ನೆಲಕ್ಕೆ ಆಗಮಿಸಿದ ಮೊದಲ ದಿನವೇ ಪಾಕ್ ತಂಡ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕಿವೀಸ್ ಸರ್ಕಾರ ಹೇಳಿದೆ.
ಕೋವಿಡ್ ನಿಯಮಗಳ ಉಲ್ಲಂಘನೆಯನ್ನು ನ್ಯೂಜಿಲ್ಯಾಂಡ್ ಸರ್ಕಾರ ಸಹಿಸುವುದಿಲ್ಲ, ಇದು ಮುಂದುವರಿದಲ್ಲಿ ತಂಡವನ್ನು ಮರಳಿ ಕಳುಹಿಸಬೇಕಾಗುತ್ತದೆ ಎಂದು ಪಾಕ್ ತಂಡಕ್ಕೆ ಛೀಮಾರಿ ಹಾಕಿದೆ.
PublicNext
28/11/2020 11:57 am