ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಜೀವನದಲ್ಲಿ ಬೆಂಗ್ಳೂರಿಗೆ ವಿಶೇಷ ಸ್ಥಾನವಿದೆ ಎಂದ ಫಿಂಚ್- ಕಾರಣ ಗೊತ್ತಾ?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಣೀಯ ತಂಡ ಎಂಬ ಹೆಗ್ಗಳಿಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇದೆ. ಅಷ್ಟೇ ಅಲ್ಲದೆ ತಂಡದ ಆಟಗಾರರಿಗೆ ಬೆಂಗಳೂರು ಅಂದ್ರೆ ಒಂದು ವಿಶೇಷ ಸಂಬಂಧ. ಹಾಗೇ ಬೆಂಗಳೂರಿನ ಮೇಲೆ ಪ್ರೀತಿ, ಸಂಬಂಧವನ್ನು ಆಸ್ಟ್ರೇಲಿಯಾದ ಲಿಮಿಟೆಡ್ ಓವರ್‌ಗಳ ಕ್ರಿಕೆಟ್‌ನ ನಾಯಕ ಆ್ಯರನ್ ಫಿಂಚ್ ಹಂಚಿಕೊಂಡಿದ್ದಾರೆ.

'ಬೆಂಗಳೂರಿನಲ್ಲಿ ಸಮಯ ಕಳೆಯುವುದು ನನಗೆ ತುಂಬಾ ಇಷ್ಟ. ಯಾಕೆಂದರೆ ಅದು ನನ್ನ ನೆಚ್ಚಿನ ನಗರ. ನನ್ನ ಪತ್ನಿಗೆ ನಾನು ಪ್ರಪೋಸ್ ಮಾಡಿದ್ದು ಇಲ್ಲೇ. ಹೀಗಾಗಿ ಬೆಂಗಳೂರಿಗೆ ನನ್ನ ಜೀವನದಲ್ಲಿ ವಿಶೇಷ ಸ್ಥಾನವಿದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಆಡಲಾಗುತ್ತಿಲ್ಲ ಎನ್ನುವುದು ನಿರಾಸೆ ತಂದಿದೆ' ಎಂದು ಫಿಂಚ್ ಹೇಳಿದ್ದಾರೆ.

'ಆರ್‌ಸಿಬಿ ತಂಡದ ಸಂಸ್ಕೃತಿಯೂ ಅತ್ಯುತ್ತಮವಾಗಿದೆ. ಇಂಥ ಅದ್ಭುತ ಫ್ರಾಂಚೈಸಿಯ ಭಾಗವಾಗಿರುವುದಕ್ಕೆ ನನಗಂತೂ ತುಂಬಾ ಖುಷಿಯಾಗಿದೆ. ಈ ಅವಕಾಶಕ್ಕಾಗಿ ನಾನು ಆಭಾರಿಯಾಗಿದ್ದೇನೆ' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

24/09/2020 03:10 pm

Cinque Terre

28.78 K

Cinque Terre

1

ಸಂಬಂಧಿತ ಸುದ್ದಿ