ಜಕಾರ್ತ: ಸೋತ ತಂಡದ ಅಭಿಮಾನಿಗಳು ಕೋಪದಲ್ಲಿ ಎದುರಾಳಿ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭಾರಿ ಹಿಂಸಾಚಾರ ನಡೆದಿರೆ. ಪರಿಣಾಮ ಕನಿಷ್ಟ 127 ಜನ ಮೃತಪಟ್ಟಿದ್ದಾರೆ.
ಇಂಡೋನೇಷ್ಯಾದ ಜಕಾರ್ತ ಸಮೀಪದಲ್ಲಿ ಮಲಂಗ್‌ನಲ್ಲಿ ನಿನ್ನೆ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಪ್ರಮುಖ ಲೀಗ್ ಆಗಿದ್ದ ಅರೆಮಾ ಎಫ್‌ಸಿ ಹಾಗೂ ಪರ್ಸಬೆಯ ಸುರಬಯ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು.
ತಮ್ಮ ತಂಡ ಸೋತಿದೆ ಎಂಬ ಕಾರಣಕ್ಕೆ ಅಭಿಮಾನಿಗಳು ರೊಚ್ಚಿಗೆದ್ದು ಏಕಾಏಕಿ ಕ್ರೀಡಾಂಗಣದೊಳಗೆ ನುಗ್ಗಿದ್ದಾರೆ. ಇದರಲ್ಲಿ ಕೆಲವರು ಕಾಲ್ತುಳಿತಕ್ಕೆ ಸಿಕ್ಕು ಮೃತಪಟ್ಟರೆ ಉಳಿದವರು ಹಿಂಸಾಚಾರದಿಂದ ಸಾವನ್ನಪ್ಪಿದ್ದಾರೆ. ಒಟ್ಟು 34 ಜನ ಕ್ರೀಡಾಂಗಣದಲ್ಲೇ ಜೀವ ಬಿಟ್ಟರೆ ಉಳಿದವರು ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಸಿಬ್ಬಂದಿ ಕೂಡ ಇದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
PublicNext
02/10/2022 02:06 pm