ಚಂಡೀಗಡ: ದಿ ಗ್ರೇಟ್ ಖಲಿ ಎಂದೇ ಜನಪ್ರಿಯರಾಗಿರುವ WWE ಚಾಂಪಿಯನ್ ಖಲಿ ತಾಳ್ಮೆ ಕಳೆದುಕೊಂಡ ಘಟನೆ ಪಂಜಾಬ್ನ ಜಲಂಧರ್ ಜಿಲ್ಲೆಯ ಫಿಲೂರ್ನಲ್ಲಿ ನಡೆದಿದೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ರಸ್ಲರ್ ಖಲಿ ಟೋಲ್ ಗೇಟ್ ಬಳಿ ಬಂದಾಗ ಟೋಲ್ ಸಿಬ್ಬಂದಿ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ದಿ ಗ್ರೇಟ್ ಖಲಿ ಕಾರಿನೊಳಗೆ ನುಗ್ಗಿದ ಟೋಲ್ ಸಿಬ್ಬಂದಿ ಸೆಲ್ಫಿ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ರೊಚ್ಚಿಗೆದ್ದ ಖಲಿ, ಸಿಬ್ಬಂದಿ ಕಪಾಳಕ್ಕೆ ಭಾರಿಸಿದ್ದಾರೆ. ಇದರಿಂದ ಟೋಲ್ ಬಳಿ ಹೈಡ್ರಾಮಾವೇ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಖಲಿ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾರಿನ ಬಳಿ ಬಂದ ವ್ಯಕ್ತಿಗೆ ತರಾಟೆ ತೆಗೆದುಕೊಂಡಿರೋದನ್ನ ಕಾಣಬಹುದು. ಅಷ್ಟಕ್ಕೂ ಸುಮ್ಮನಾಗದ ಖಲಿ, ಕಾರಿನಿಂದ ಕೆಳಗೆ ಇಳಿದು ಅವರ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಅವನು ನನಗೆ ಏಕೆ ಹೊಡೆಯಬೇಕಿತ್ತು ಎಂದು ಟೋಲ್ ಸಿಬ್ಬಂದಿ ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಖಲಿಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
PublicNext
12/07/2022 04:14 pm