ಜಲಂಧರ್ : ಪಂಜಾಬ್ ನ ಜಲಂಧರ್ ಜಿಲ್ಲೆಯ ಮಲಿಯನ್ ಹಳ್ಳಿಯಲ್ಲಿ ನಡೆಯುತ್ತಿದ್ದ ಕಬಡ್ಡಿ ಆಟದ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಎಂಬ ಆಟಗಾರ ಮೇಲೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಇನ್ನು ದುಷ್ಕರ್ಮಿಗಳು ಸಂದೀಪ್ ಅವರ ತಲೆ ಮತ್ತು ಎದೆಯ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಜಲಂಧರ್ (ಗ್ರಾಮೀಣ) ಉಪ ಪೊಲೀಸ್ ವರಿಷ್ಠಾಧಿಕಾರಿ ಲಖ್ವಿಂದರ್ ಸಿಂಗ್ ಹತ್ಯೆಯನ್ನು ದೃಢಪಡಿಸಿದ್ದಾರೆ. ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಜಗತ್ತನ್ನು ಆಳಿದ್ದಾರೆ.
ಪಂಜಾಬ್ ಹೊರತುಪಡಿಸಿ ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಭಾರತೀಯ ಕಬ್ಬಡಿ ಸ್ಪರ್ಧಿಯಾಗಿದ್ದು, ಗೆಲುವಿನ ಮೂಲಕ ಇತ್ತೀಚಿನ ದಿನಗಳಲ್ಲಿ ಖ್ಯಾತಿಯನ್ನು ಗಳಿಸಿದರು.
PublicNext
14/03/2022 11:14 pm