ಗುವಾಹಟಿ: ಅರ್ಜಿಂಟಿನಾದ ಖ್ಯಾತ ಫುಟ್‌ಬಾಲ್ ಆಟಗಾರ, ದಿವಂಗತ ಡಿಯೇಗೋ ಮೆರಡೋನ ಅವರಿಗೆ ಸೇರಿದ ಭಾರಿ ಮೌಲ್ಯದ ವಾಚ್ ಅನ್ನು ದುಬೈನಲ್ಲಿ ಕದ್ದಿದ್ದ ಆರೋಪಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.
ಅಸ್ಸಾಂ ಪೊಲೀಸರು, ದುಬೈ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ವಾಚ್ ಅನ್ನು ವಶಪಡಿಸಿಕೊಂಡಿದ್ದಾರೆ. ವಾಜಿದ್ ಹುಸೇನ್ ಎಂಬ ವ್ಯಕ್ತಿ ದುಬೈನಿಂದ ಡಿಯೇಗೋ ಮೆರಡೋನ ವಾಚ್ ಕದ್ದು ಅಸ್ಸಾಂಗೆ ಬಂದಿದ್ದ. ಇಂದು ಮುಂಜಾನೆ 4 ಗಂಟೆಗೆ ಸಿಬ್‌ಸಾಗರ್‌ನಲ್ಲಿರುವ ಆತನ ನಿವಾಸದಲ್ಲಿ ಪೊಲೀಸರು ವಾಜಿದ್‌ನನ್ನು ಬಂಧಿಸಿದ್ದಾರೆ.
PublicNext
11/12/2021 02:29 pm