ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ 09 ತಿಂಗಳ ಹಸುಗೂಸಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಈ ದುಷ್ಟನನ್ನು ಹುಡುಕುತ್ತಿದ್ದ ಮುಂಬೈ ಪೊಲೀಸರು ಸದ್ಯ ಯಶಸ್ವಿಯಾಗಿದ್ದಾರೆ. ಹೈದ್ರಾಬಾದ್ ನ 23 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಆರೋಪಿ. ಹೈದರಾಬಾದ್ ನಿವಾಸಿಯಾಗಿದ್ದ ಇವನು ಫುಡ್ ಡೆಲಿವರಿ ಆ್ಯಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ತಿಳಿದು ಬಂದಿದೆ.
ಐಸಿಸಿ ಟಿ 20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೋತಾಗ ಭಾರತ ತಂಡದ ನಾಯಕನ ವೈಫಲ್ಯಕ್ಕೆ ಅನೇಕ ಅಭಿಮಾನಿಗಳು ಟೀಕಿಸಿದ್ದರು. ಆದರೆ, ಇದಕ್ಕಿಂತಲೂ ನೀಚ ಕೃತ್ಯ ಎಸಗಿದ ಆರೋಪಿ ಸಾಮಾಜಿಕ ಜಾಲತಾಣದ ಮೂಲಕ 09 ತಿಂಗಳ ಕೂಸು ವಮಿಕಾಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ.
@Criccrazyygirl ಟ್ವಿಟರ್ ಖಾತೆ ಮೂಲಕ ವಿರಾಟ್ ಮತ್ತು ಅನುಷ್ಕಾ ಶರ್ಮಾ ಅವರ ಒಂಬತ್ತು ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆಗಳನ್ನು ಹಾಕಿದ್ದ. ದೇಶಾದ್ಯಂತ ಈ ಟ್ವೀಟ್ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ, ಈ ಕುರಿತು ದೆಹಲಿ ಮಹಿಳಾ ಆಯೋಗ ಪ್ರಕರಣವನ್ನು ದಾಖಲಿಸಿತು.
PublicNext
10/11/2021 06:21 pm