ನವದೆಹಲಿ : ಟೀಂ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರ ವೈಯಕ್ತಿಕ ಪೋಟೊಗಳನ್ನು ಸೋರಿಕೆ ಮಾಡುವ ಬೆದರಿಕೆ ಹಾಕಿದ್ದ ಕೋಲ್ಕತಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಸೀನ್ ಜಹಾನ್ ಅವರ ದೂರು ನೀಡಿದ ಬಳಿಕ ಕೋಲ್ಕತಾದ ಕನ್ನಿಂಗ್ ಸ್ಟ್ರೀಟ್ ರಸ್ತೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಸೀನ್ ಜಹಾನ್ ಅವರ ವೈಯಕ್ತಿಕ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ ಮಾಡುವುದಾಗಿ ಕಳೆದ ಎರಡು ತಿಂಗಳುಗಳಿಂದ ಶಮಿ ಪತ್ನಿಗೆ ಬಂಧಿತ ಬೆದರಿಕೆ ಹಾಕುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ಹಿಂದೆ ಹಸೀನ್ ಜಹಾನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯು ಕರೆ ಮಾಡಿ ದುಡ್ಡಿಗೆ ಆಗ್ರಹಿಸಿದ್ದಳು.
ನಂತರ ಕರೆ ಮಾಡುತ್ತಿದ್ದದ್ದು ಪುರುಷನಾಗಿದ್ದು, ಆ ಮಹಿಳೆಯ ಮಗ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
PublicNext
26/11/2020 03:19 pm