ಬೆಂಗಳೂರು: ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಫ್ಯಾನ್ಸ್ ಚಿತ್ರದ ಒಂದೊಂದು ಸೀನ್ ಗಳನ್ನು ರಿಮೇಕ್ ಮಾಡುತ್ತಿದ್ದಾರೆ. ಅದರಲ್ಲೂ ಯಾವುದೇ ಸಭೆ ಸಮಾರಂಭದಲ್ಲಿ ಶೀವಲ್ಲಿ ಸ್ಟೆಪ್ಸ್ ಫಿಕ್ಸ್ ಆಗಿಬಿಟ್ಟಿವೆ.
ಸದ್ಯ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಜ್ಜಿ ಇದೇ ಹಾಡಿಗೆ ಹೆಜ್ಜೆ ಹಾಕಿದ್ದರು.
ಇದೀಗ ಅದೇ ಚಿತ್ರದ ಮತ್ತೊಂದು ಸೀನ್ ನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರು ಮಗಳು ಇಂಡಿ ಜತೆಗೆ ‘ಪುಷ್ಟ’ ಸಿನಿಮಾದ ಡೈಲಾಗ್ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಐಪಿಎಲ್ ಟೂರ್ನಿಯ ಮೂಲಕ ಭಾರತದೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿರುವ ವಾರ್ನರ್, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮಗಳೊಂದಿಗೆ ‘ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್’ ಎಂದು ಮಾಸ್ ಡೈಲಾಗ್ ಹೇಳುವ ವಿಡಿಯೊವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಖತ್ ವೈರಲ್ ಆಗುತ್ತಿದೆ.
PublicNext
29/01/2022 07:25 pm