ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ವೆಸ್ಟ್ ಇಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್‌ರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕ್ರಿಸ್ ಗೇಲ್ ಜೊತೆಗಿರುವ ಫೋಟೋವನ್ನು ವಿಜಯ್ ಮಲ್ಯ ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿ, ''ನನ್ನ ಉತ್ತಮ ಸ್ನೇಹಿತ ಕ್ರಿಸ್ಟೋಫರ್ ಹೆನ್ರಿ ಗೇಲ್ ಅವರನ್ನು ಭೇಟಿಯಾದೆ. ಆರ್‌ಸಿಬಿ ತಂಡಕ್ಕೆ ನೇಮಿಸಿಕೊಂಡಾಗಿನಿಂದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಜೊತೆ ನಾನು ಉತ್ತಮ ಸ್ನೇಹ ಹೊಂದಿದ್ದೇನೆ. ಅವರು ಎಂದಿಗೂ ಉತ್ತಮ ಆಟಗಾರ' ಎಂದು ಬರೆದುಕೊಂಡಿದ್ದಾರೆ.
2022ರ ಐಪಿಎಲ್ ಪಂದ್ಯಗಳಿಂದ ಕ್ರಿಸ್ ಗೇಲ್ ದೂರ ಉಳಿದಿದ್ದರು. ಕೋವಿಡ್ ಕಾರಣದಿಂದ ಬಯೋಬಬಲ್ ನಿಯಮಗಳನ್ನು ಆಟಗಾರರು ಪಾಲಿಸಬೇಕಿತ್ತು. ಆದರೆ ಈ ನಿಯಮಗಳನ್ನು ಒಪ್ಪದ ಗೇಲ್ ಐಪಿಎಲ್ ಟೂರ್ನಿಯಿಂದ ದೂರವಾಗಿದ್ದರು.
PublicNext
22/06/2022 10:48 am