ಕಾರವಾರ: ಚಿನ್ನ ಗೆದ್ದ ನೀರಜ್ ಚೋಪ್ರಾ ಹೆಸರು ಈಗ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಇಂದು ಅವರ ಹೆಸರಿಟ್ಟುಕೊಂಡವರಿಗೂ ಅದೃಷ್ಟ ಖುಲಾಯಿಸಿದ್ದು, ನೀರಜ್ ಎಂಬ ಹೆಸರಿನವರಿಗೆ ಈ ಹೋಟೆಲಿನಲ್ಲಿ ಫ್ರೀ ಆಹಾರ ನೀಡಲಾಗುತ್ತಿದೆ. ಹೌದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್ ನಲ್ಲಿ ಈ ವಿಶೇಷ ಆಫರ್ ನೀಡಲಾಗಿದೆ.
ನೀರಜ್ ಎಂಬ ಹೆಸರಿನ ಯಾರೇ ಬಂದರೂ ಉಚಿತವಾಗಿ ಊಟ ನೀಡಲಾಗುತ್ತಿದೆ. ಅಲ್ಲದೆ ಈ ಹೋಟೆಲ್ ನಲ್ಲಿ ಸಿಗುವ ಯಾವ ಪದಾರ್ಥಗಳನ್ನು ಆರ್ಡರ್ ಮಾಡಿದರೂ ಉಚಿತವಾಗಿ ತಿಂದು ಹೋಗಬಹುದಾಗಿದೆ. ಈ ಆಫರ್ ಆಗಸ್ಟ್ 15ರ ವರೆಗೂ ಮಾತ್ರ.ಹೋಟೆಲ್ ಮಾಲೀಕ ಆಶೀಶ್ ನಾಯಕ ಮಾತನಾಡಿ, ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ತೆರಳುವ ರೋಪ್ ವೇನಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು.
ಗುಜರಾತ್ ನ ಭರೂಚ್ ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ನೀರಜ್ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವ ಮೂಲಕ ನೀರಜ್ ಗೆಲುವನ್ನು ಸಂಭ್ರಮಿಸಿದ್ದರು.
PublicNext
12/08/2021 12:35 pm