ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಿಗ ದೇವದತ್ ಭರ್ಜರಿ ಬ್ಯಾಟಿಂಗ್, ವಿರಾಟ್ ವೈಫಲ್ಯ- ಹೈದರಾಬಾದ್ ತಂಡಕ್ಕೆ 164 ರನ್‌ಗಳ ಗುರಿ

ದುಬೈ: ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್‌ನಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಹೈದರಾಬಾದ್ ತಂಡಕ್ಕೆ 164 ರನ್‌ಗಳ ಗುರಿ ನೀಡಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಐಪಿಎಲ್ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದೇವದತ್ ಪಡಿಕ್ಕಲ್ 56 ರನ್ (42 ಎಸೆತ, 8 ಬೌಂಡರಿ) ಆ್ಯರೋನ್ ಫಿಂಚ್ 29 ರನ್ (27 ಎಸೆತ, 1 ಬೌಂಡರಿ, 2 ಸಿಕ್ಸ್‌), ವಿರಾಟ್ ಕೊಹ್ಲಿ 14 ರನ್ (13 ಎಸೆತ), ಎಬಿ ಡಿವಿಲಿಯರ್ಸ್ 51 ರನ್ (30 ಎಸೆತ, 4 ಬೌಂಡರಿ, 2 ಸಿಕ್ಸ್‌) ಸಹಾಯದಿಂದ 5 ವಿಕೆಟ್ ನಷ್ಟಕ್ಕೆ 163 ರನ್ ದಾಖಲಿಸಿದೆ.

ಓಪನರ್​ಗಳಾದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿಯು ಪವರ್ ಪ್ಲೇ ಓವರ್ ಅನ್ನು ಅತ್ಯುತ್ತಮವಾಗಿ ಉಪಯೋಗಿಸಿಕೊಂಡು ಯಾವುದೇ ವಿಕೆಟ್ ನಷ್ಟವಿಲ್ಲದೆ ಹತ್ತನೇ ಓವರ್ ಮುಕ್ತಾಯಕ್ಕೆ 86 ರನ್ ಗಳಿಸಿತು. ಆದರೆ 11ನೇ ಓವರಿನಲ್ಲಿ ದೇವದತ್ ಪಡಿಕ್ಕಲ್ ಹಾಗೂ 12ನೇ ಓವರಿನ ಮೊದಲ ಎಸೆತದಲ್ಲೇ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡರು. ಬಳಿಕ ನಾಯಕ ವಿರಾಟ್ ಕೊಹ್ಲಿ ಕೇವಲ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಗೆ ಎಬಿ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸಿದರು.

ಎಸ್‌ಆರ್‌ಎಚ್‌ ತಂಡದ ಪರ ತಂಗರಸು ನಟರಾಜನ್, ವಿಜಯ್‌ ಶಂಕರ್‌ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Edited By : Vijay Kumar
PublicNext

PublicNext

21/09/2020 09:20 pm

Cinque Terre

97.15 K

Cinque Terre

0