ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ವಿವಾದಾತ್ಮಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಾಧ್ಯಮ ಸಂದರ್ಶನವೊಂದಲ್ಲಿ ಮಾತನಾಡಿದ ಅಖ್ತರ್ 'ಗಜ್ವಾ-ಎ-ಹಿಂದ್' ಪರ ಬ್ಯಾಟಿಂಗ್ ಮಾಡಿದ್ದಾರೆ. ''ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಂಡು ನಂತರ ಭಾರತದ ಮೇಲೆ ಗಜ್ವಾ-ಎ-ಹಿಂದ್‌ಗಾಗಿ ಎಲ್ಲ ಕಡೆಯಿಂದ ದಾಳಿ ಮಾಡುತ್ತೇವೆ'' ಎಂದು ಹೇಳಿಕೆ ನೀಡಿದ್ದಾರೆ.
ಶೋಯೆಬ್ ಅಖ್ತರ್ ವಿವಾದಗಳೊಂದಿಗೆ ಸದಾ ನಂಟು ಹೊಂದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಇತರ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಅವರು ಆಗಾಗ್ಗೆ ವಿವಾದತ್ಮಾಕ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಆದರೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಅವರ ಗಜ್ವಾ-ಎ-ಹಿಂದ್ (ಭಾರತವನ್ನು ಸಂಪೂರ್ಣ ಗೆಲ್ಲುವುದು) ಉಲ್ಲೇಖದ ವಿಡಿಯೋ ವೈರಲ್ ಆಗುತ್ತಿದ್ದು, ಅವರ ಚಿಂತನೆಗಳು ತೀವ್ರ ಟೀಕೆಗೆ ಗುರಿಯಾಗುತ್ತಿವೆ.
ಅಖ್ತರ್ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಪಾಕಿಸ್ತಾನದ ಮೊದಲ ಕ್ರಿಕೆಟಿಗನಲ್ಲ. ಇದಕ್ಕೂ ಮೊದಲು ಶಾಹಿದ್ ಅಫ್ರಿದಿ ಮತ್ತು ಜಾವೇದ್ ಮಿಯಾಂದ್ ರಂತಹ ಕ್ರಿಕೆಟಿಗರು ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
PublicNext
25/12/2020 02:23 pm