ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಡೇ ಆ್ಯಂಡ್ ನೈಟ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಕೆಟ್ಟ ದಾಖಲೆಯೊಂದಿಗೆ ಸೋಲು ಕಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 244 ರನ್ ಪೇರಿಸಿ 56 ರನ್‌ಗಳಿಂದ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಮೊದಲ ಇನ್ನಿಂಗ್ಸ್ ಬಳಿಕ 62 ರನ್ ಲೀಡ್ ಜೊತೆ ಮೂರನೇ ದಿನದ ಆಟ ಆರಂಭಿಸಿದ ಭಾರತವು ಆಸ್ಟ್ರೇಲಿಯಾ ವೇಗಿಗಳ ತತ್ತರಿಸಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇದುವರೆಗೆ ಭಾರತ ಒಂದು ಇನ್ನಿಂಗ್ಸ್‌ನಲ್ಲಿ ಗಳಿಸಿದ ಕನಿಷ್ಠ ಮೊತ್ತ ಎಂಬ ಕೆಟ್ಟ ದಾಖಲೆಗೆ ಪಾತ್ರವಾಗಿದೆ. ಯಾವೊಬ್ಬ ಬ್ಯಾಟ್ಸ್‌ಮನ್ ಸಹ ಎರಡಂಕಿಗೆ ಹೋಗಲೇ ಇಲ್ಲ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ 4 ರನ್, ಮಯಾಂಕ್ ಅಗರವಾಲ್ 9 ರನ್, ಜಸ್‌ಪ್ರೀತ್ ಬುಮ್ರಾ 2 ರನ್, ಚೇತೇಶ್ವರ ಪೂಜಾರ 0, ವಿರಾಟ್ ಕೊಹ್ಲಿ 4 ರನ್, ಅಜಿಂಕ್ಯ ರಹಾನೆ 0, ಹನುಮ ವಿಹಾರಿ 8 ರನ್, ವೃದ್ಧಿಮಾನ್ ಸಹಾ 4 ರನ್, ರವಿಚಂದ್ರನ್ ಅಶ್ವಿನ್ 0 ಹಾಗೂ ಉಮೇಶ್ ಯಾದವ್ ಅಜೇಯ 4 ರನ್ ಗಳಿಸಿದರೆ, 1 ರನ್ ಗಳಿಸಿದ್ದ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿ ಪಡೆದರು.
PublicNext
19/12/2020 03:57 pm